ಪರಿಷ್ಕೃತ ಪಿಂಚಣಿ ನಿಗದಿಗೊಳಿಸಿ

24mnv01
Published on

ಮಾನ್ವಿ: ಸರ್ಕಾರದ ಏಳನೇ ವೇತನ ಆಯೋಗದ ವರದಿಯ ಶಿಫಾರಸ್ಸಿನಂತೆ ಪರಿಷ್ಕೃತ ಪಿಂಚಣಿ ನಿಗದಿಗೊಳಿಸಬೇಕು. ಈ ಕುರಿತ ವಿವರವನ್ನು ಮಹಾಲೇಖಪಾಲರಿಗೆ ಕಳುಹಿಸಿಕೊಡುವ ಮೂಲಕ ಮಾಸಿಕ ಪಿಂಚಣಿ ದೊರೆಯಲು ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಅಧೀಕ್ಷಕಿ ಅನ್ನಪೂರ್ಣಗೆ ಕರ್ನಾಟಕ ನಿವೃತ್ತ ನೌಕರರ ವೇದಿಕೆ ತಾಲೂಕು ಘಟಕದಿಂದ ಸೋಮವಾರ ಮನವಿ ಸಲ್ಲಿಸಲಾಯಿತು.

ತಾಲೂಕಿನಲ್ಲಿ ಜು.1 ರಿಂದ ಜು.31 ರ ವರೆಗೆ ವಯೋ ನಿವೃತ್ತಿ ಹೊಂದಿದ ಹಾಗೂ ಈ ಅವಧಿಯಲ್ಲಿ ಮೃತಪಟ್ಟ ನೌಕರರ ಕುಟುಂಬದವರಿಗೆ ಕೂಡ ಪರಿಷ್ಕೃತ ಪಿಂಚಣಿಯನ್ನು ನಿಗದಿಗೊಳಿಸಬೇಕು ಎಂದು ಒತ್ತಾಯಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net