ವಿಭಾಗೀಯ ವ್ಯವಸ್ಥಾಪಕರಿಂದ ರೈಲ್ವೆ ಕಾಮಗಾರಿ ಅವಲೋಕನ : ಅಮೃತ್ ಭಾರತ್ ಯೋಜನೆ ಹಿನ್ನೆಲೆ

railway
ರೈಲ್ವೆ ಪಾಲಕ್ಕಾಡ್ ವಿಭಾಗೀಯ ವ್ಯವಸ್ಥಾಪಕ ಅರುಣ್ ಕುಮಾರ್ ಚತುರ್ವೇದಿ ರೈಲ್ವೆ ಕಾಮಗಾರಿಗಳ ಅವಲೋಕನ ನಡೆಸಿದರು. ಪಾಲಕ್ಕಾಡ್ ವಿಭಾಗದ ಅಧಿಕಾರಿಗಳು ಜತೆಗಿದ್ದರು.
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ರೈಲ್ವೆ ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿ ಅಮೃತ್ ಭಾರತ್ ಯೋಜನೆಯನ್ವಯ ನಡೆಸಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಅವಲೋಕನಕ್ಕಾಗಿ ರೈಲ್ವೆ ಪಾಲಕ್ಕಾಡ್‌ನ ವಿಭಾಗೀಯ ವ್ಯವಸ್ಥಾಪಕ ಅರುಣ್ ಕುಮಾರ್ ಚತುರ್ವೇದಿ ವಿವಿಧ ಕೇಂದ್ರಗಳಿಗೆ ಭೇಟಿ ನೀಡಿದರು.

ಕಾಸರಗೋಡು, ಪಯ್ಯನ್ನೂರು, ಕಣ್ಣೂರು, ಮಾಹೆ, ತಲಶ್ಯೇರಿ, ವಡಗರ ರೈಲ್ವೆ ನಿಲ್ದಾಣಗಳಿಗೆ ಭೇಟಿ ನೀಡಿ ಕಾಮಗಾರಿಗಳ ಅವಲೋಕನ ನಡೆಸಿದರು. ಇದೇ ಸಂದರ್ಭ ನೇತ್ರಾವತಿ ಮತ್ತು ಮಂಗಳೂರು ಸೆಂಟ್ರಲ್ ನಡುವೆ ಜಾರಿಯಲ್ಲಿರುವ ರಸ್ತೆ ಕೆಳಸೇತುವೆ ಕಾಮಗಾರಿ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದರು.

ಪ್ರಗತಿಯಲ್ಲಿರುವ ಕೆಲಸವನ್ನು ಮತ್ತಷ್ಟು ಶೀಘ್ರಗತಿಯಲ್ಲಿ ನಡೆಸುವುದರ ಜತೆಗೆ ಗುಣಮಟ್ಟ ಕಾಯ್ದುಕೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಭೇಟಿ ಆಯೋಜಿಸಲಾಗಿತ್ತು. ವಿವಿಧ ನಿಲ್ದಾಣಗಳಲ್ಲಿ ಹೆಚ್ಚುವರಿಯಾಗಿ ಸುರಕ್ಷತಾ ಕ್ರಮಗಳನ್ನು ಖಚಿತಪಡಿಸಿಕೊಳ್ಳಲು ಸುರಕ್ಷತಾ ತಪಾಸಣೆ ನಡೆಸಿದರು.
ತಪಾಸಣೆ ಸಂದರ್ಭ ಪಾಲಕ್ಕಾಡ್ ವಿಭಾಗದ ಅಧಿಕಾರಿಗಳು ಜತೆಗಿದ್ದರು. ನೀಲೇಶ್ವರ ಮತ್ತು ಕಾಞಂಗಾಡ್ ನಿಲ್ದಾಣಗಳನ್ನು ಪರಿಶೀಲಿಸಿ, ನಿರ್ಮಾಣ ಪ್ರಕ್ರಿಯೆಯಲ್ಲಿ ಮೂಲಸೌಕರ್ಯ ಹೆಚ್ಚಿಸಲು, ಪ್ರಯಾಣಿಕರ ಅನುಭವವನ್ನು ಸುಧಾರಿಸಲು ಮತ್ತು ಸಂಭಾವ್ಯ ಅಡೆತಡೆಗಳನ್ನು ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net