ಕಂದಾಯ ಗ್ರಾಮಗಳ ರಚನೆ ಪ್ರಗತಿಗೆ ಸಂಸದ ತೀವ್ರ ಅತೃಪ್ತಿ

MP A NarayanaSwamy CTD 23 JAN 20
Published on

ಚಿತ್ರದುರ್ಗ: ಜಿಲ್ಲೆಯಲ್ಲಿ ಖಾಸಗಿ ಜಮೀನಲ್ಲಿ ವಾಸವಿರುವ ದಾಖಲೆ ರಹಿತ ಜನ ವಸತಿಗಳ ವಿವರ ಮತ್ತು ಸರ್ಕಾರಿ ಆದೇಶದಂತೆ ರಚನೆ ಆಗಿರುವ ಹೊಸ ಕಂದಾಯ ಗ್ರಾಮಗಳ ರಚನೆ‌ ಪ್ರಗತಿ ಕುರಿತಂತೆ ಸಂಸದ ಎ.ನಾರಾಯಣ ಸ್ಚಾಮಿ ಡಿಸಿ ಕಚೇರಿಯಲ್ಲಿ ಇಂದು ಪ್ರಗತಿ ಪರಿಶೀಲಿಸಿದರು.

ಹಿರಿಯೂರು, ಚಳ್ಳಕೆರೆ, ಹೊಸದುರ್ಗ, ಚಿತ್ರದುರ್ಗ, ಹೊಳಲ್ಕೆರೆ, ಮೊಳಕಾಲ್ಮೂರು ತಾಲೂಕುಗಳಲ್ಲಿ ಅಧಿಸೂಚನೆಗೆ ಗಳಿಸಿದ ಬೇಚರಾಕ್ ಗ್ರಾಮಗಳು, ಅಂತಿಮ ಅಧಿಸೂಚನೆ ಕುರಿತಂತೆ ಅಗಿರುವ ಸಾಧನೆ, ಲೋಪದೋಷ‌ ಕುರಿತಂತೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ನಾನು ಗುಮಾಸ್ತ ಅಲ್ಲ, ಅಧಿಕಾರಿಗಳಿಗೆ ಬದ್ಧತೆ ಇಲ್ಲ, ಉತ್ತರದಾಯಿತ್ವವೂ ಇಲ್ಲ. ನಾನು ಕಣ್ಣು ಮುಚ್ಚಿಕೊಂಡು ಕುಳಿತುಕೊಳ್ಳಲು ಆಗಲ್ಲವೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಂದಾಯ ಗ್ರಾಮಗಳ ರಚನೆ ಪ್ರಗತಿ ಗಮನಿಸಿ, ಅರ್ಹರಿಗೆ ಹಕ್ಕು ಪತ್ರ ಕೊಡಿಸುವುದು ಇದು ಜಿಲ್ಲಾಧಿಕಾರಿ ಕೆಲಸ ಎಂದು ಸಭೆಯಲ್ಲಿದ್ದ ಎಡಿಸಿ ಸಿ.ಸಂಗಪ್ಪಗೆ ಸೂಚಿಸಿದರು.

ಹತ್ತು ಮನೆಗಳಿಗೂ ಅಧಿಕ ಮನೆಗಳಿರುವ ಬೇಚರಾಕ್ ಗ್ರಾಮಗಳ ಪಟ್ಟಿ ಮಾಡಿಡ ವರದಿ ಕೊಡಬೇಕೆಂದು ಎಡಿಎಲ್ ಆರ್ ಹಾಗೂ ಕಂದಾಯ ಅಧಿಕಾರಿಗಳಿಗೆ ತಿಂಗಳ ಒಳಗೆ ಕೊಡ ಬೇಕೆಂದರು. ಇದೇ ವೇಳೆ ಸಂಸದರು ಸಿ ಎಸ್ ಆರ್ ನಿಧಿ ಬಳಕೆ ಕುರಿತು ಚರ್ಚೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net