ಆಡಳಿತ ವ್ಯವಸ್ಥೆಯಲ್ಲಿ ಕಂದಾಯ ಇಲಾಖೆ ಪಾತ್ರ ಪ್ರಮುಖ

Revenue Department
Published on

ಕುಮಟಾ: ರಾಜ ಮಹಾರಾಜರ ಕಾಲದಿಂದಲೂ ಆಡಳಿತಗಳು ಎಷ್ಟೇ ಬದಲಾದರೂ ಕಂದಾಯ ಇಲಾಖೆ ಹಾಗೂ ಅದರ ದಾಖಲೆಗಳು ಸಂರಕ್ಷಿತವಾಗಿ ಮುಂದುವರಿದುಕೊಂಡು ಬಂದಿದ್ದು, ಆಡಳಿತ ವ್ಯವಸ್ಥೆಯಲ್ಲಿ ಕಂದಾಯ ಇಲಾಖೆಗೆ ಅತ್ಯಂತ ಮಹತ್ವವಿದೆ. ಕಂದಾಯ ಇಲಾಖೆಯೇ ಇತರೆಲ್ಲ ಇಲಾಖೆಗಳ ತಾಯಿಯಾಗಿದೆ ಎಂದು ಉಪವಿಭಾಗಾಧಿಕಾರಿ ರಾಘವೇಂದ್ರ ಜಗಲಾಸರ ಹೇಳಿದರು.

ತಾಲೂಕು ಆಡಳಿತ ಸೌಧದ ಆವರಣದಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ ಸಸಿ ನೆಟ್ಟು ಪಟ್ಟಣದ ಪುರಭವನದಲ್ಲಿ ಶನಿವಾರ ಆಯೋಜಿಸಿದ್ದ ಕಂದಾಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಮೂಲ ಕಂದಾಯ ಇಲಾಖೆ ಕಾಲಾನುಸಾರ ಎಷ್ಟೇ ಇಲಾಖೆಗಳಾಗಿ ವಿಸ್ತರಿಸಿದರೂ ನಮ್ಮ ಜವಾಬ್ದಾರಿಗಳು ಕಡಿಮೆಯಾಗದೆ ಹೆಚ್ಚುತ್ತಲೇ ಇದೆ ಎಂದರು.
ತಹಸೀಲ್ದಾರ್ ಶಿವಯೋಗಿ ನೈಕಲಮಠ ಅಧ್ಯಕ್ಷತೆ ವಹಿಸಿದ್ದರು. ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕ ಸುಂದರ್, ಗ್ರೇಡ್- 2 ತಹಸೀಲ್ದಾರರಾದ ಅಶೋಕ್ ಭಟ್, ಸತೀಶ ಗೌಡ ಇದ್ದರು. ಕಂದಾಯ ದಿನಾಚರಣೆಯ ಅಂಗವಾಗಿ ಕಂದಾಯ ಹಾಗೂ ಸರ್ವೆ ವಿಭಾಗದ ಸಿಬ್ಬಂದಿ ವೈವಿಧ್ಯಮಯ ಹಾಡು ಕುಣಿತದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಕಂದಾಯ ಹಾಗೂ ಭೂಮಾಪನ ಇಲಾಖೆಯ ಅಧಿಕಾರಿ, ಸಿಬ್ಬಂದಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net