ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕಂದಾಯ ಇಲಾಖೆ ಡಿಜಿಟೀಕರಣ

nrp 1 (1)
Published on

ಎನ್.ಆರ್.ಪುರ: ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕಂದಾಯ ಇಲಾಖೆಯನ್ನು ಡಿಜಿಟೀಕರಣ ಮಾಡಲಾಗಿದ್ದು, ಪ್ರತಿಯೊಂದು ದಾಖಲೆಯನ್ನು ತಂತ್ರಜ್ಞಾನ ಬಳಸಿ ಆನ್‌ಲೈನ್‌ನಲ್ಲಿ ಸೇವ್ ಮಾಡಲಾಗಿದೆ. ಸಾರ್ವಜನಿಕರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಸಂಬಂಧ ಪಟ್ಟ ದಾಖಲೆಗಳನ್ನು ಪಡೆಯಬಹುದು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ತಾಲೂಕು ಕಚೇರಿಯಲ್ಲಿ 8 ಜನ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟ್ಯಾಪ್ ಹಾಗೂ 14 ಜನ ಫಲಾನುಭವಿಗಳಿಗೆ 94 ಸಿಅಡಿ ಹಕ್ಕುಪತ್ರ ವಿತರಿಸಿ ಮಾತನಾಡಿ, ಹಲವು ವರ್ಷಗಳಿಂದ ಕಂದಾಯ ಹಾಗೂ ಅರಣ್ಯಭೂಮಿ ಬಗ್ಗೆ ಗೊಂದಲ ಮುಂದುವರಿದಿದೆ. ರೈತರಿಗೆ ಹಕ್ಕುಪತ್ರ ಕೊಡಬೇಕಾದರೆ ಕಾನೂನು ಬದ್ದವಾಗಿ ನೀಡಬೇಕು ಎಂಬುದು ನಮ್ಮ ಸರ್ಕಾರದ ನಿಲುವು. ಈ ಹಿಂದೆ ಶೃಂಗೇರಿ ಹಾಗೂ ಮೂಡಿಗೆರೆಯಲ್ಲಿ ಕಾನೂನು ಬಾಹಿರವಾಗಿ ಹಕ್ಕುಪತ್ರ ನೀಡಿ ರೈತರು ತೊಂದರೆ ಅನುಭವಿಸಿದರು ಎಂದರು.

ನಾನು ಶಾಸಕನಾದ ಮೇಲೆ ಶೃಂಗೇರಿ ಕ್ಷೇತ್ರದಲ್ಲಿ 1500 ರಿಂದ 2 ಸಾವಿರ ಜನರಿಗೆ ಹಕ್ಕುಪತ್ರ ನೀಡಲಾಗಿದೆ. ಸರ್ಕಾರದ ಆದೇಶವನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು. ಪಂಚ ಗ್ಯಾರಂಟಿ ಮೂಲಕ ಜನರಿಗೆ ಆರ್ಥಿಕ ಶಕ್ತಿ ತುಂಬಲಾಗಿದೆ. ಅಧಿಕಾರಿಗಳು ಪಂಚ ಗ್ಯಾರಂಟಿಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು. ಶೃಂಗೇರಿ ಕ್ಷೇತ್ರದಲ್ಲಿ 100 ಕೋಟಿ ರೂ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ತಹಸೀಲ್ದಾರ್ ತನುಜ ಟಿ.ಸವದತ್ತಿ, ಪಪಂ ಅಧ್ಯಕ್ಷೆ ಜುಬೇದ, ಉಪಾಧ್ಯಕ್ಷೆ ಉಮಾ ಕೇಶವ್, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ, ಸದಸ್ಯರಾದ ಮುನಾವರ್ ಪಾಷ, ವಸೀಂ, ಇ.ಸಿ.ಜೋಯಿ, ಕೆ.ಎಂ.ಸುಂದರೇಶ್, ಸಾಜು,ಶಶಿಕುಮಾರ್, ಸಮೀರ ನಹೀಂ,ಅಂಜುಂ, ಮಾಳೂರುದಿಣ್ಣೆ ರಮೇಶ್, ನಟರಾಜ್, ಸುನೀಲ್ ಕುಮಾರ್, ಯಾಸ್ಮೀನ್, ಮಂಜು, ರಘುವೀರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net