ವರುಣ ವ್ಯಾಪ್ತಿಯಲ್ಲಿ ಕಂದಾಯ ಅದಾಲತ್

23
Published on

ಮೈಸೂರು: ಮೈಸೂರು ತಾಲೂಕಿನ ಮೊಸಂಬಾಯನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ವರುಣ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕಂದಾಯ ಅದಾಲತ್ ನಡೆಯಿತು.
ಮೊಸಂಬಾಯನಹಳ್ಳಿ ಗ್ರಾಪಂಗೆ ಸೇರಿದ ಮಾರಶೆಟ್ಟಿಹಳ್ಳಿ, ಟಿ.ಎಂ.ಹುಂಡಿ, ಸಜ್ಜೆಹುಂಡಿ, ಜಂತಗಳ್ಳಿ, ಕಿರಾಳು, ಯಾಂದಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಡಾ.ಯತೀಂದ್ರ, ಪ್ರತಿ ಗ್ರಾಮದಲ್ಲೂ ಸಮಸ್ಯೆಗಳಿದ್ದು, ಆದ್ಯತೆ ಮೇರೆಗೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ರಸ್ತೆ, ಮೆಟ್ಲಿಂಗ್ ಮಾಡಿಸಿ ಡಾಂಬರ್ ಹಾಕಿಸಿಕೊಡಿ, ವಿದ್ಯುತ್ ಕಂಬ ಹಾಕಿಸಿಕೊಡಿ. ಯು.ಜಿ.ಡಿ ಮಾಡಿಸಿಕೊಡಿ, ದೇವಸ್ಥಾನ ನಿರ್ಮಾಣಕ್ಕೆ ಹಣ ಕೊಡಿ, ಚಿಕ್ಕಳ್ಳಿಯಿಂದ ಹದಿನಾರುವರೆಗೆ ಬಸ್ ಹಾಕಿಸಿಕೊಡಿ, ಸ್ಮಶಾನ, ವೃದ್ಧಾಪ್ಯ ವೇತನ, ವಿಧವಾ ವೇತನ ಮಾಡಿಸಿಕೊಡಿ ಎಂದು ಗ್ರಾಮಸ್ಥರು ಅಹವಾಲು ಸಲ್ಲಿಸಿದರು. ಸಮಸ್ಯೆಗಳನ್ನು ಬಗೆಹರಿಸುವಂತೆ ಇಲಾಖೆ ಅಧಿಕಾರಿಗಳಿಗೆ ಯತೀಂದ್ರ ಸಿದ್ದರಾಮಯ್ಯ ಸೂಚಿಸಿದರು.
ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಎನ್.ವಿಜಯ್, ಆಪ್ತ ಸಹಾಯಕ ಶಿವಸ್ವಾಮಿ, ಗ್ರಾಪಂ ಅಧ್ಯಕ್ಷೆ ಸಾಕಮ್ಮ, ಜಿಪಂ ಮಾಜಿ ಸದಸ್ಯ ಪಟೇಲ್ ಜವರೇಗೌಡ, ಮುಖಂಡರಾದ ಶಿವಮ್ಮ, ನಿರ್ಮಲಾ, ಜಂತಗಳ್ಳಿ ಜಗದೀಶ, ಶಿವಪ್ರಸಾದ್, ಪಾಲಾಕ್ಷ, ರಾಜಣ್ಣ, ಉಮೇಶ್, ಉತ್ತನಹಳ್ಳಿ ಶಿವಣ್ಣ, ರವಿ, ಗಿರೀಶ್, ಮೆಲ್ಲಹಳ್ಳಿ ರವಿ, ಅನು ಕುಮಾರಗೌಡ, ಧರ್ಮೇಶ್, ಆರ್.ಐ.ಶಂಕರ, ಪಿಡಿಒ ಗೋಪಾಲಕೃಷ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net