ರೇವತಗಾಂವದಲ್ಲಿ ಖಡೋಬಾ ದೇವರ ಜಾತ್ರೆ ಸಂಪನ್ನ

Revathagaon, Khadoba Deva Jatre, Malasabai, Bhanubai, Kandalagaon, Asangi, Sangali,
ರೇವತಗಾಂವ ಗ್ರಾಮದ ಖಂಡೋಬಾ ದೇವರ ಜಾತ್ರೆ ನಿಮಿತ್ತ ನಡೆದ ಪಲ್ಲಕ್ಕಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಭಕ್ತರು.
Published on

ರೇವತಗಾಂವ: ಗ್ರಾಮದ ಖಂಡೋಬಾ ದೇವರು ಹಾಗೂ ಅವರ ಧರ್ಮಪತ್ನಿಯರಾದ ಮಾಲಸಾಬಾಯಿ ಮತ್ತು ಭಾನುಬಾಯಿ ದೇವರುಗಳ ಜಾತ್ರೆ ಶನಿವಾರ, ಭಾನುವಾರ ಅದ್ದೂರಿಯಾಗಿ ನೆರವೇರಿತು.

ಶನಿವಾರ ಬೆಳಗಿನ ಜಾವ 5 ಗಂಟೆಗೆ ರುದ್ರಾಭಿಷೇಕ, ಭಕ್ತರಿಂದ ದೀಡ ನಮಸ್ಕಾರ ನಡೆಯಿತು. ಮಧ್ಯಾಹ್ನ 3 ಗಂಟೆಗೆ ಖಂಡೋಬಾ ದೇವರ ಪಲ್ಲಕ್ಕಿ ಮಹೋತ್ಸವ ಸುಮಂಗಲೆಯರ ಆರತಿ, ಪೂಜಾರಿಗಳ ಜ್ಯೋತಿಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಕಂದಲಗಾಂವದ 15 ಪ್ರಸಿದ್ಧ ಕುದುರೆಗಾರರು ಖಂಡೋಬಾ ದೇವರ ಅವತಾರದೊಂದಿಗೆ ಸವಾರಿ ಮಾಡಿದರು. ಸಂಜೆ 8 ಗಂಟೆಯಿಂದ ಭಾನುವಾರ ನಸುಕಿನ ಜಾವ 4 ಗಂಟೆಯವರೆಗೆ ಸಾಂಗಲಿ ಜಿಲ್ಲೆಯ ಆಸಂಗಿ ಗ್ರಾಮದ ಬಾಳು ವಾೆ ಮತ್ತು ಮಾಳಸಾ ಮುರಳಿ ಹಾಗೂ ಮಂಗಸೂಳಿ ನೇತೃತ್ವದಲ್ಲಿ ಖಂಡೋಬಾ ದೇವರ ಚರಿತ್ರಾಮೃತ ಜರುಗಿತು.

ಭಾನುವಾರ ನಸುಕಿನ ಜಾವ 4 ಗಂಟೆಯಿಂದ 6 ಗಂಟೆಯವರೆಗೆ ಲಂಗೂರ ಹರಿಯುವ ಕಾರ್ಯಕ್ರಮ ನೆರವೇರಿತು. ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net