

ರೇವತಗಾಂವ: ನವರಾತ್ರಿಯ ಘಟಸ್ಥಾಪನೆಯ ಮುನ್ನಾ ದಿನ ಗ್ರಾಮದ ಅಂಬಾಭವಾನಿ ಯುವಕ ಮಂಡಳಿಯ ನೂರಾರು ಯುವಕರು ತುಳಜಾಪುರಕ್ಕೆ ಹೋಗಿ ತುಳಜಾಭವಾನಿ ಮಂದಿರದಲ್ಲಿ ದೀಪ ಹೊತ್ತಿಸಿಕೊಂಡು ಅದು ಆರದಂತೆ ನೂರಾರು ಕಿ.ಮೀ. ಕಾಲ್ನಡಿಗೆ ಮೂಲಕ ಗ್ರಾಮಕ್ಕೆ ಆಗಮಿಸಿದರು.
ಮುತ್ತೈದೆಯರು ಜ್ಯೋತಿಯಾತ್ರೆಯನ್ನು ಗುರುವಾರ ಸ್ವಾಗತ ಮಾಡಿಕೊಂಡರು. ಗ್ರಾಮದಲ್ಲಿ ಪ್ರತಿಷ್ಠಾಪನೆ ಮಾಡಿರುವ ದೇವಿ ಮೂರ್ತಿ ಮುಂದೆ ದೀಪ ಬೆಳಗಿಸಲಾಯಿತು.
ಗುರುವಾರದಿಂದ 9 ದಿನ ಅಂಬಾಭವಾನಿಗೆ ನಿತ್ಯ ಪೂಜೆ ಸಲ್ಲಿಸಲಾಗುವುದು. ಗ್ರಾಮದಲ್ಲಿ ಪ್ರತಿಷ್ಠಾಪಿಸಿರುವ ಅಂಬಾಭವಾನಿಯ ಮುಂದೆ ಪ್ರತಿದಿನ ಭಕ್ತರು ಬೆಳಗ್ಗೆ ಮತ್ತು ಸಂಜೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ದೇವಾಸ್ಥಾನ ದೀಪಾಲಂಕಾರದಿಂದ ಝಗಮಗಿಸುತ್ತಿದೆ. ದಿನನಿತ್ಯ ನೂರಾರು ಭಕ್ತರು ತಮ್ಮ ಹರಕೆ ಸಲ್ಲಿಸುವುದು, ಪೂಜೆ ಮಾಡುತ್ತ ನಮಿಸುವರು.