ನಾಳೆಯಿಂದ ಉಮರಜ ಶ್ರೀ ರೇವಣಸಿದ್ಧೇಶ್ವರ ಜಾತ್ರೆ

RVT 6-1
Published on

ರೇವತಗಾಂವ: ಸಮೀಪದ ಉಮರಜದ ರೇವಣಸಿದ್ಧೇಶ್ವರ ಜಾತ್ರೆಯು ಫೆ.8 ರಂದು ನಸುಕಿನ ಜಾವ ನೂರಂದಯ್ಯ ಹಿರೇಮಠ ಗುರುಗಳಿಂದ ಶ್ರೀ ರೇವಣಸಿದ್ಧೇಶ್ವರ ಸ್ಥಾವರ ಲಿಂಗಕ್ಕೆ ರುದ್ರಾಭಿಷೇಕ ಮಹಾಪೂಜೆ ನೆರವೇರಿಸುವುದರೊಂದಿಗೆ ಆರಂಭವಾಗಲಿದೆ.
ನಂತರ ಭಕ್ತರಿಂದ ಧೀರ್ಘದಂಡ ನಮಸ್ಕಾರ ಹಾಗೂ ಘೂಳೇಶ್ವರ ಮಹಾರಾಜರು ವಿರಚಿತ ಅಮೆರಿಕಾ ಗಗನಯಾತ್ರೆ ಮತ್ತು ಚಾಲುಕ್ಯ ರಾಣಿ ಪೈತಲದೇವಿ ಗ್ರಂಥಗಳ ಬಿಡುಗಡೆ ಸಮಾರಂಭ ನೆರವೇರಲಿದೆ. ರಾತ್ರಿ 10 ಗಂಟೆಗೆ ಶ್ರೀ ರೇವಣಸಿದ್ಧೇಶ್ವರ ದೇವರ ಪಲ್ಲಕ್ಕಿ ಮಹೋತ್ಸವ ವಿವಿಧ ವಾದ್ಯ ವೈಭವಗಳೊಂದಿಗೆ ನಡೆಯಲಿದೆ. ರಾತ್ರಿ 12 ಗಂಟೆಗೆ ಮದ್ದು ಸುಡಲಾಗುವುದು.
ಫೆ.9 ರಂದು ನಸುಕಿನ ಜಾವ 3 ಗಂಟೆಗೆ ರುದ್ರಾವತಾರಿ ಘೂಳೇಶ್ವರ ದೇವರೊಡಗೂಡಿ ಗುಡಿಗೆ ಬಾನ ಒಯ್ಯುವುದು. ನಸುಕಿನ 4 ಗಂಟೆಗೆ ಘೂಳೇಶ್ವರರಿಂದ ನುಡಿ- ಮತ್ತುಗಳು ನಡೆಯಲಿವೆ. ಬೆಳಗ್ಗೆ 10 ಗಂಟೆಗೆ ಪ್ರಸಿದ್ಧ ಪೈಲ್ವಾನರಿಂದ ಜಂಗೀ ನಿಕಾಲಿ ಕುಸ್ತಿಗಳು, ಮಧ್ಯಾಹ್ನ 12 ಗಂಟೆಗೆ ಮಡ್ಡಿಸಂಖ ಪೈಲ್ವಾನರಿಂದ ಕಲ್ಲು ಎತ್ತುವ ಸ್ಪರ್ಧೆ ನಡೆಯಲಿದೆ. ರಾತ್ರಿ 10 ಗಂಟೆಗೆ ಶಿವಲಿಂಗೇಶ್ವರ ಕಲಾ ನಾಟ್ಯ ಸಂಘ ಕುಲ್ಲಳ್ಳಿಯವರಿಂದ ‘ಮದುವೆಯಾಗಿ ಬಂದವಳು ಧರ್ಮದ ಮನೆ ಮುರಿದಳು’ ಅರ್ಥಾತ್ ‘ಹೇಳಿದರೆ ನಿನ್ನ ಹೆತ್ತವರಾಣೆ’ ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net