ಶಿರಾಡೋಣದಲ್ಲಿ ಗಜಾನನ ವಿಸರ್ಜನೆ

RVT 27-1
Published on

ರೇವತಗಾಂವ: ಸಮೀಪದ ಶಿರಾಡೋಣ ಗ್ರಾಮದ ಹುಲಜಂತಿ ರಸ್ತೆಯಲ್ಲಿರುವ ಶ್ರೀ ಮಹಾಲಿಂಗರಾಯ ಗಜಾನನ ಯುವಕ ಮಂಡಳಿಯವರು ಪ್ರತಿಷ್ಠಾಪಿಸಿದ್ದ ಗಣಪತಿಯನ್ನು ಬುಧವಾರ ವಿಸರ್ಜಿಸಲಾಯಿತು.
ಈ ವೇಳೆ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಅಲ್ಲದೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 91.36 ರಷ್ಟು ಅಂಕಗಳನ್ನು ಪಡೆದ ಗ್ರಾಮದ ಪ್ರವೀಣ ವಿಜಯಕುಮಾರ ಸಾತಪುತೆ, ಪಿಯುಸಿಯಲ್ಲಿ ಶೇ. 91.36 ಅಂಕಗಳನ್ನು ಪಡೆದ ಆಕಾಶ ಅಮೋಘಸಿದ್ಧ ಪೂಜಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಿವೃತ್ತ ಶಿಕ್ಷಕ ಎನ್.ಬಿ. ಸಾತಪುತೆ, ಸಂಘದ ಅಧ್ಯಕ್ಷರಾದ ಬಾಬುರಾವ ಸಲಗರ, ಉಪಾಧ್ಯಕ್ಷರಾದ ನಾಗಪ್ಪ ಕುಂಬಾರ, ಕಾಶಿನಾಥ ಬಿರಾದಾರ, ಗಜಾನಂದ ಬಗಲಿ, ಪಾಂಡುರಂಗ ಕೋಳಿ, ಶಿವಾನಂದ ಮಾಳಿ, ಶಾಂತುಗೌಡ ಬಿರಾದಾರ, ಲಕ್ಷ್ಮಣ ಮಾಳಿ, ಬಸುಗೌಡ ಬಿರಾದಾರ, ವಿಠ್ಠಲಗೌಡ ಬಿರಾದಾರ, ವಿಜಯಕುಮಾರ ಸಾತಪುತೆ ಸೇರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net