ಗ್ರಾಮದ ಅಭಿವೃದ್ಧಿಗೆ ಒಗ್ಗಟ್ಟಾಗಿ ಶ್ರಮಿಸೋಣ

RVT 4-1
Published on

ರೇವತಗಾಂವ: ಗ್ರಾಮದ ಅಭಿವೃದ್ಧಿಗಾಗಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕಿದೆ ಎಂದು ನೂತನ ಗ್ರಾಪಂ ಸದಸ್ಯ ಸಿದ್ದರಾಮ ಹತ್ತರಕಿ ಹೇಳಿದರು.

ರೇವತಗಾಂವ ಗ್ರಾಮ ಪಂಚಾಯಿತಿಯ ಶಿರಾಡೋಣ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಗ್ರಾಮದ 9 ಜನ ನೂತನ ಗ್ರಾಪಂ ಸದಸ್ಯರಿಗೆ ಸೋಮವಾರ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಹಾಗೂ ಮತದಾರರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಗ್ರಾಮದ ಅಭಿವೃದ್ಧಿಯಿಂದಲೇ ಭಾರತದ ಅಭಿವೃದ್ಧಿ ಸಾಧ್ಯವಾಗಿದೆ. ಸಾಮಾನ್ಯ ಜನರು ಗ್ರಾಮದಲ್ಲಿ ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ರೈತನಿಗೆ ಒಂದು ನೂರು ದಿನಗಳ ಕಾಲವಾದರೂ ಉದ್ಯೋಗವನ್ನು ವರ್ಷದಲ್ಲಿ ಕೊಡಿಸಬೇಕು ಎಂದು ಹೇಳಿದರು.

ಗ್ರಾಪಂ ಸದಸ್ಯರಾದ ಕಾಂತಾಬಾಯಿ ದೈಗೊಂಡ, ಯಲ್ಲವ್ವ ಬೀರುಣಗಿ, ರಾಜಶ್ರೀ ಹಬಗೊಂಡೆ, ಲಕ್ಷ್ಮಿಬಾಯಿ ಬಗಲಿ, ಗಣಪತಿ ಪಾಂಡ್ರೆ, ಸುರೇಶ ಬನಸೋಡೆ, ಭೀರಪ್ಪ ಸೋಲಂಕರ ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net