ಶಾಲೆ ಮಕ್ಕಳಿಗೆ ಅಕ್ಕಿ, ಬೇಳೆ ವಿತರಣೆ

RVT 21-1
Published on

ರೇವತಗಾಂವ: ಕರೊನಾ ಭೀತಿಯಿಂದ ಶಾಲಾ ಮಕ್ಕಳಿಗೆ ರಜಾ ಅವಧಿ ವಿಸ್ತರಣೆ ಮಾಡಿರುವುದರಿಂದ ಈ ಅವಧಿಯಲ್ಲಿ ಬಿಸಿಯೂಟದ ಬದಲು ಅಕ್ಕಿ, ಬೇಳೆ ಹಾಗೂ ಗೋಧಿಯನ್ನು ಮಕ್ಕಳ ಪಾಲಕ ಪೋಷಕರಿಗೆ ಶನಿವಾರ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿತರಿಸಲಾಯಿತು.

ಪ್ರಸ್ತುತ 53 ದಿನಗಳ ಅವಧಿಯ ರೇಶನ್ ಸರಬರಾಜಾಗಿದ್ದು, ತಲಾ ವಿದ್ಯಾರ್ಥಿಗೆ ಪ್ರತಿದಿನಕ್ಕೆ 100 ಗ್ರಾಂ ಅಕ್ಕಿ, 37 ಗ್ರಾಂ ಬೆಳೆ ಹಾಗೂ ಗೋಧಿಯನ್ನು ಒಂದೇ ಕಂತಿನಲ್ಲಿ ಶಾಲಾಭಿವೃದ್ಧಿ ಸಮಿತಿ ಸಮ್ಮುಖದಲ್ಲಿ ನೀಡಲಾಯಿತು. ನಂತರ ವಿದ್ಯಾರ್ಥಿಯ ಪಾಲಕ/ಪೋಷಕರ ಸಹಿ ಪಡೆದುಕೊಳ್ಳಲಾಯಿತು.

ಶಾಲೆ ಮುಖ್ಯೋಪಾಧ್ಯಾಯರಾದ ಎಸ್.ಜೆ. ಬಿಜ್ಜರಗಿ ಮಾತನಾಡಿದರು. ಶಾಲೆಯ ಎಲ್ಲ ಶಿಕ್ಷಕರುಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net