ಕ್ವಾರಂಟೈನ್ ಕೇಂದ್ರಕ್ಕೆ ಪಿಎಸ್‌ಐ ಭೇಟಿ

RVT 11-1
Published on

ರೇವತಗಾಂವ: ಲಾಕ್‌ಡೌನ್ ಸಡಿಲಿಕೆಯಿಂದಾಗಿ ಸಂಖ್ಯೆ ಇನ್ನೂ ನಿಂತಿಲ್ಲ.
ಮಂಗಳವಾರ ಮತ್ತೆ ಮೂವರು ಮುಂಬೈಯಿಂದ ಗ್ರಾಮಕ್ಕೆ ಬಂದಿದ್ದು, ಅವರು ನಾವು ಮನೆಯಲ್ಲೇ ಸ್ವಯಂ ಕ್ವಾರಂಟೈನ್ ಇರುತ್ತೇವೆ. ಸರ್ಕಾರಿ ಶಾಲೆಯಲ್ಲಿ ಕ್ವಾರಂಟೈನ್‌ನಲ್ಲಿರಲು ಹಿಂದೇಟು ಹಾಕುತ್ತಿದ್ದರು.
ವಿಷಯ ತಿಳಿದು ಚಡಚಣ ಠಾಣೆಯ ಪಿಎಸ್‌ಐ ಸಿ.ಬಿ. ಬಾಗೇವಾಡಿ ಅವರು ಸ್ಥಳಕ್ಕಾಗಮಿಸಿ ವಲಸಿಗರ ಮನವೊಲಿಸಿ ಸರ್ಕಾರಿ ಶಾಲೆಯಲ್ಲಿ ಕ್ವಾರಂಟೈನ್‌ಗೆ ಸ್ಥಳಾಂತರಿಸಿದರು.
ನಂತರ ವಲಸಿಗರನ್ನುದ್ದೇಶಿಸಿ ಮಾತನಾಡಿ, ನಮ್ಮ ಸುರಕ್ಷತೆ ನಮ್ಮ ಕೈಯಲ್ಲಿರುವುದರಿಂದ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಗಮನಹರಿಸಬೇಕು. ಸ್ವಚ್ಛತೆ, ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸುವ ಮೂಲಕ ಕರೊನಾದಿಂದ ಪಾರಾಗಬೇಕು ಎಂದು ಹೇಳಿದರು. ಗ್ರಾಮಸ್ಥರು ಹಾಗೂ ಯುವಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net