ರೇವತಗಾಂವ ಪಿಕೆಪಿಎಸ್ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ

RVT 12-1
Published on

ರೇವತಗಾಂವ: ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಸಿದರಾಯ ವಿಠ್ಠಲ ಬಿರಾದಾರ, ಉಪಾಧ್ಯಕ್ಷರಾಗಿ ಸುವರ್ಣಾ ಮಲ್ಲಪ್ಪ ಹಕ್ಕೆ ಗುರುವಾರ ಅವಿರೋಧ ಆಯ್ಕೆಗೊಂಡರು.

ಅಧ್ಯಕ್ಷರ ಹುದ್ದೆಗೆ ಸಿದರಾಯ ವಿಠ್ಠಲ ಬಿರಾದಾರ, ಉಪಾಧ್ಯಕ್ಷರ ಹುದ್ದೆಗೆ ಸುವರ್ಣಾ ಮಲ್ಲಪ್ಪ ಹಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನೇ ಅವಿರೋಧವಾಗಿ ಆಯ್ಕೆ ಮಾಡಲಾಯಿತೆಂದು ಚುನಾವಣಾಧಿಕಾರಿ ವಿಜಯಕುಮಾರ ನಾಯಕ್ ತಿಳಿಸಿದರು.

ನೂತನ ಆಡಳಿತ ಮಂಡಳಿ ಸದಸ್ಯರಿಗೆ ಪಿಕೆಪಿಎಸ್ ವತಿಯಿಂದ ಸನ್ಮಾನಿಸಲಾಯಿತು.

ಪಿಕೆಪಿಎಸ್ ಅಧಿಕಾರಿ ಸುನೀಲ ಕೋಳಿ, ನೂತನ ಸದಸ್ಯರಾದ ದುಂಡಪ್ಪ ಮಾಳಿ, ಹಣಮಂತ ಕುಂಬಾರ, ಶಿವಪ್ಪ ಆದಿಗೊಂಡೆ, ದಾನವ್ವ ಜಿಗಜೇವಣಿ, ಹಣಮಂತ ಪೂಜಾರಿ, ಶರಣಪ್ಪ ಧಾಬೆ ಹಾಗೂ ಪಿಕೆಪಿಎಸ್ ಮಾಜಿ ಅಧ್ಯಕ್ಷ ಶ್ರೀಶೈಲ ಬನ್ನೆ, ಗ್ರಾಪಂ ಮಾಜಿ ಅಧ್ಯಕ್ಷ ಮಹಾದೇವ ಅಂಕಲಗಿ, ಕಾಮೇಶ ಪಾಟೀಲ, ಮಾರುತಿ ಹಕ್ಕೆ, ಅರವಿಂದ ನಂದಗೊಂಡೆ, ಮಹಾದೇವ ತೇಲಿ, ಮಲ್ಲು ಮಾನೆ, ಅಮಸಿದ್ಧ ಸಾಕರೆ, ಮಹಾದೇವ ಬಿರಾದಾರ, ಜ್ಞಾನೇಶ್ವರ ತಳವಾರ, ಮಲ್ಲಪ್ಪ ಹಕ್ಕೆ, ಸಾತಪ್ಪ ಬಿರಾದಾರ, ಮಾಳಪ್ಪ ಧಾಬೆ, ಸಿದ್ದಪ್ಪ ಹೂಗಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net