ನಿವರಗಿ ಗ್ರಾಮಸ್ಥರಿಂದ ಸ್ವಯಂ ದಿಗ್ಬಂಧನ

RVT 15-2
Published on

ರೇವತಗಾಂವ: ಲಾಕ್‌ಡೌನ್ ವಿಸ್ತರಣೆಯಾಗುತ್ತಿದ್ದಂತೆ ಜನರು ಅನಗತ್ಯ ಓಡಾಡುವುದ್ದನ್ನು ತಪ್ಪಿಸಲು ಮುಂದಾಗಿರುವ ನಿವರಗಿ ಗ್ರಾಮದ ಅಂಬೇಡ್ಕರ್ ಹಾಗೂ ಮಾತಂಗ ಕಾಲನಿ ನಿವಾಸಿಗಳು ರಸ್ತೆಗೆ ಮುಳ್ಳಿನ ಬೇಲಿ ಹಾಕಿಕೊಳ್ಳುವ ಮೂಲಕ ಸ್ವಯಂ ದಿಗ್ಬಂಧನ ವಿಧಿಸಿಕೊಂಡಿದ್ದಾರೆ.
ಕರೊನಾ ರುದ್ರನರ್ತನ ಮುಂದುವರಿದಿದ್ದರಿಂದ ಇಂಥ ನಿರ್ಧಾರ ಕೈಗೊಂಡಿದ್ದು, ತಮ್ಮ ಕಾಲನಿ ನಿವಾಸಿಗಳು ಹೊರಗಡೆ ಹಾಗೂ ಹೊರಗಿನವರು ಒಳಬಾರದಂತೆ ಸೀಲ್‌ಡೌನ್ ಮಾಡಿಕೊಂಡಿದ್ದಾರೆ. ನಿವರಗಿ ಗ್ರಾಪಂ ಉಪಾಧ್ಯಕ್ಷೆ ಭಾರತಿ ಕಾಂಬಳೆ, ಗ್ರಾಮದ ಬೀಟ್ ಹವಾಲ್ದಾರ್ ಪಿ.ಕೆ. ಮಲ್ಲಾರಿ ಗ್ರಾಮಸ್ಥರಾದ ಸಂಜೀವ ಕಾಂಬಳೆ, ಸುನೀಲ ಕಾಂಬಳೆ, ಸುಭಾಸ ಕಾಂಬಳೆ, ರಾಮಚಂದ್ರ ಕಾಂಬಳೆ, ಹಣಮಂತ ಐಹೊಳ್ಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net