ಗಡಿಯಲ್ಲಿ ಪುನಃ ರಸ್ತೆ ಬಂದ್

RVT 21-1
Published on

ರೇವತಗಾಂವ: ಕರೊನಾ ಹರಡದಂತೆ ರಾಜ್ಯ ಸರ್ಕಾರ ಮುಂಜಾಗ್ರತೆ ವಹಿಸಿ ಗಡಿಯಲ್ಲಿ ಸಂಪರ್ಕ ರಸ್ತೆಗಳನ್ನು ಬಂದ್ ಮಾಡಿ, ಜನ ಗಡಿ ದಾಟದಂತೆ ಎಚ್ಚರವಹಿಸುತ್ತಿದ್ದರೂ, ರಾತ್ರೋರಾತ್ರಿ ಕೆಲ ಕಿಡಿಗೇಡಿಗಳು ಗಡಿಯಲ್ಲಿನ ಮುಳ್ಳಿನ ಬೇಲಿ ಕಿತ್ತು ಒಳ ನುಸುಳುತ್ತಿದ್ದಾರೆ.
ಮಹಾರಾಷ್ಟ್ರದ ನಂದೂರ ಮಾರ್ಗವಾಗಿ ಮಂಗಳವೇಡ ಹಾಗೂ ಪಂಢರಪುರ ಸೇರಿದಂತೆ ಇತರೆಡೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಲಾಕ್‌ಡೌನ್ ಹಿನ್ನೆಲೆಯಲ್ಲಿ ಈ ರಸ್ತೆಯನ್ನು ಗ್ರಾಪಂ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಮುಳ್ಳಿನ ಬೇಲಿ ಹಾಕಿ ಬಂದ್ ಮಾಡಿದ್ದರು. ಆದರೆ, ಕೆಲ ಕಿಡಿಗೇಡಿಗಳು ರಾತ್ರೋರಾತ್ರಿ ರಸ್ತೆಯಲ್ಲಿನ ಮುಳ್ಳುಬೇಲಿ ತೆರವುಗೊಳಿಸಿದ್ದರು. ಇದನ್ನರಿತ ಗ್ರಾಪಂ ಅಧಿಕಾರಿಗಳು ಗ್ರಾಮದ ಬೀಟ್ ಹವಾಲ್ಧಾರ್ ಎಲ್.ಎಸ್. ರಾಠೋಡ ಹಾಗೂ ಸಾರ್ವಜನಿಕರ ನೆರವಿನಿಂದ ಗಡಿ ರಸ್ತೆಯನ್ನು ಪುನಃ ಬಂದ್ ಮಾಡಿಸಿದರು.
ನಾರಾಯಣ ವಾಘಮೋರೆ, ಸುರೇಶ ಹಕ್ಕೆ, ಪ್ರಕಾಶ ಜೀಗಜೇವಣಿ, ಸಿದ್ದರಾಮ ಕುಂಬಾರ, ಅರವಿಂದ ನಂದಗೊಂಡೆ, ಉಮೇಶ ಜೀಗಜೇವಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net