ಆರೋಗ್ಯ ಹಸ್ತದ ಸದುಪಯೋಗ ಪಡೆಯಿರಿ

RVT 12-3
Published on

ರೇವತಗಾಂವ: ಕರೊನಾದಿಂದ ರಕ್ಷಣೆ ಮಾಡಿಕೊಳ್ಳಲು ಹೆಣಗಾಡುತ್ತಿರುವ ಜನಸಾಮಾನ್ಯರಿಗಾಗಿ ಕಾಂಗ್ರೆಸ್ ಪಕ್ಷ ಆರೋಗ್ಯ ಹಸ್ತ ಕಾರ್ಯಕ್ರಮ ಕೈಗೊಂಡಿದೆ ಎಂದು ಮಾಜಿ ಶಾಸಕ ವಿಠಲ ಕಟಕದೊಂಡ ಹೇಳಿದರು.

ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಹಸ್ತದಡಿ ಕಾರ್ಯಕರ್ತರಿಗೆ ಕಿಟ್ ವಿತರಿಸಿ ಅವರು ಮಾತನಾಡಿದರು.

ಜನಸಾಮಾನ್ಯರು ಕರೊನಾಕ್ಕೆ ಹೆದರುವ ಅಗತ್ಯವಿಲ್ಲ. ಪ್ರತಿ ಗ್ರಾಪಂಗೆ ಒಬ್ಬ ನುರಿತ ಕಾರ್ಯಕರ್ತರನ್ನು ನೇಮಕ ಮಾಡಿ, ಒಂದು ಆರೋಗ್ಯ ಕಿಟ್ ನೀಡಲಾಗುತ್ತಿದೆ. ಅವರಿಗೆ ಒಂದು ಲಕ್ಷ ರೂ.ವರೆಗೆ ವಿಮೆ ಗೊತ್ತು ಪಡಿಸಲಾಗಿದೆ. ಸ್ವತಃ ಕಾರ್ಯಕರ್ತರೇ ಜನರ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಆರ್ಥಿಕವಾಗಿ ದೇಶ ಕುಗ್ಗುತ್ತಿರುವುದರಿಂದ ಈ ಆರೋಗ್ಯ ಹಸ್ತ ಜನಸಾಮಾನ್ಯರ ಕೈಹಿಡಿಯಲಿದೆ. ಮುಂಬರುವ ದಿನಗಳಲ್ಲಿ ಸೊಂಕು ಮತ್ತಷ್ಟು ತೀವ್ರವಾಗಲಿದ್ದು, ಜನರಿಗೆ ತಿಳಿವಳಿಕೆ ನೀಡಲು ಕಾರ್ಯಕರ್ತರು ಶ್ರಮಿಸಲಿದ್ದಾರೆ ಎಂದು ಹೇಳಿದರು.

ಚಡಚಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಹೇಬಗೌಡ ಬಿರಾದಾರ, ತಾಪಂ ಉಪಾಧ್ಯಕ್ಷ ರವಿ ಬಿರಾದಾರ, ಯುವ ಕಾಂಗ್ರೆಸ್ ಅಧ್ಯಕ್ಷ ಅಮಸಿದ್ಧ ಬಿಜ್ಜರಗಿ, ತಾಪಂ ಸದಸ್ಯ ಶಿವಾಜಿ ವಾಲಿಕಾರ, ಬಸುಸಾಹುಕಾರ ಬಿರಾದಾರ, ಕಾಮೇಶ ಪಾಟೀಲ, ಚನ್ನಪ್ಪ ಜಿಗಜೇವಣಿ, ಸಿದ್ಧರಾಮ ಹೂಗಾರ, ಮಲ್ಲು ಮಾನೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net