ಗರ್ಭಿಣಿಯರಿಗೆ ಕೋವಿಡ್ ಪರೀಕ್ಷೆ

Corona
Published on

ರೇವತಗಾಂವ: ಗರ್ಭಿಣಿಯರು ಕರೊನಾ ಬಗ್ಗೆ ಭಯಪಡುವ ಅಗತ್ಯವಿಲ್ಲ. ರೋಗದ ಬಗ್ಗೆ ಮುನ್ನೆಚ್ಚರಿಕೆ ವಹಿಸಿದರೆ ಯಾವ ತೊಂದರೆಯೂ ಇಲ್ಲ ಎಂದು ಇಂಡಿ ತಾಲೂಕಾಧಿಕಾರಿಗಳ ಕಾರ್ಯಾಲಯದ ಪ್ರಯೋಗಾಲಯ ತಂತ್ರಜ್ಞೆ ಕಾವೇರಿ ಮೇತ್ರಿ ಹೇಳಿದರು.

ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗುರುವಾರ ಬಾಣಂತಿಯರಿಗೆ ಹಾಗೂ ಗ್ರಾಮಸ್ಥರ ಗಂಟಲು ದ್ರವ ಮಾದರಿ ಸಂಗ್ರಹಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗರ್ಭಿಣಿಯರು ಕರೊನಾ ಲಕ್ಷಣಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು. ನಿತ್ಯ ವೈದ್ಯರ ಅಥವಾ ಆರೋಗ್ಯ ಕಾರ್ಯಕರ್ತೆಯರ ಸಂಪರ್ಕದಲ್ಲಿರಬೇಕು. ಬಾಣಂತಿಯರಿಗೆ ಬೇಗನೆ ರಕ್ತ ಹೆಪ್ಪುಗಟ್ಟುವ ಸಾಧ್ಯತೆಗಳಿರುವುದರಿಂದ ಹೆಚ್ಚಾಗಿ ನೀರು ಕುಡಿಯುವುದು ಮತ್ತು ಅವರು ಹಾಸಿಗೆ ಮೇಲೆಯೇ ಹೆಚ್ಚು ವಿಶ್ರಾಂತಿ ಪಡೆಯುವುದು ಅಗತ್ಯವಿಲ್ಲ. ಬದಲಾಗಿ ಓಡಾಡುತ್ತ ಇದ್ದರೆ ರಕ್ತ ಸಂಚಲನೆಗೆ ನೆರವಾಗುತ್ತದೆ ಎಂದು ಹೇಳಿದರು.

ಚಡಚಣ ಸಮುದಾಯ ಆರೋಗ್ಯ ಕೇಂದ್ರದ ಬಿಎಚ್‌ಇಒ ಆರ್.ಬಿ. ಲಾಳಸಂಗಿ ಮಾತನಾಡಿ, ಕೋವಿಡ್-19 ಹರಡಲು ಗರ್ಭಿಣಿಯರು ಮತ್ತು ಇತರ ಸಾಮಾನ್ಯ ವ್ಯಕ್ತಿಗಳು ಎಂಬ ವ್ಯತ್ಯಾಸವಿಲ್ಲ. ಇತರರಿಗೆ ತಗಲುವಂತೆ ಗರ್ಭಿಣಿಯರಿಗೂ ಸೋಂಕು ತಗುಲಬಹುದು. ರೋಗ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ಹೇಳಿದರು. ಗ್ರಾಮದ 11 ಜನ ಬಾಣಂತಿಯರು, ಸಾರ್ವಜನಿಕರು ಸೇರಿ 22 ಜನ ಕೋವಿಡ್ ಪರೀಕ್ಷೆ ಮಾಡಿಸಿಕೊಂಡರು.

ಶ್ರೀಧರ ಬಂಡಗರ, ಸುರೇಶ ವಾಲಿಕಾರ, ಪಿ.ಆರ್. ಕುರಿ, ಸದಾಶಿವ ಕಾಗೆ, ಆಶಾ ಕಾರ್ಯಕರ್ತೆಯರು ಸೇರಿದಂತೆ ಗ್ರಾಮದ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net