ಸ್ವಯಂ ಸೀಲ್‌ಡೌನ್ ಮಾಡಿಕೊಂಡ ಗ್ರಾಮಸ್ಥರು

RVT 28-1
Published on

ರೇವತಗಾಂವ: ಗ್ರಾಮದಲ್ಲಿ ಸೋಮವಾರ ಕುಟುಂಬವೊಂದರಲ್ಲಿ ಕರೊನಾ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮಂಗಳವಾರ ಬಂದ್ ಮಾಡುವ ಮೂಲಕ ಗ್ರಾಮವನ್ನು ಸೀಲ್‌ಡೌನ್ ಮಾಡಿಕೊಂಡಿದ್ದಾರೆ.

ರೋಗ ನಿರೋಧಕ ಸಿಂಪರಣೆ: ಗ್ರಾಮದಲ್ಲಿ ಕರೊನಾ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಗ್ರಾಪಂ ಸಿಬ್ಬಂದಿ ಗ್ರಾಮದ ಪ್ರಮುಖ ಬೀದಿಗಳು ಸೇರಿದಂತೆ ಗ್ರಾಮದ ತುಂಬೆಲ್ಲ ಕೀಟನಾಶಕ ಸಿಂಪರಣೆ ಮಾಡಿದರು.

ಮನೆ ಸುತ್ತ ಸೀಲ್‌ಡೌನ್

ಕರೊನಾ ಪ್ರಕರಣಗಳು ಕಂಡು ಬಂದ ಸ್ಥಳಕ್ಕೆ ಚಡಚಣ ಪಿಎಸ್‌ಐ ಎಂ.ಎ. ಸತಿಗೌಡರ ಭೇಟಿ ನೀಡಿ ಪರಿಶೀಲಿಸಿದರು. ಸೋಂಕಿತರ ಮನೆ ಸುತ್ತ ಮುಳ್ಳಿನ ಬೇಲಿ ಹಾಕುವ ಮೂಲಕ ಆ ಪ್ರದೇಶವನ್ನು ಸೀಲ್‌ಡೌನ್ ಮಾಡಿಸಿದರು. ಗ್ರಾಪಂ ಕಾರ್ಯದರ್ಶಿ ಬಿ.ಕೆ. ಕುಂಬಾರ, ಗ್ರಾಮ ಲೆಕ್ಕಾಧಿಕಾರಿ ಎಂ.ಜಿ. ದ್ಯಾಮಗೊಂಡ, ಗ್ರಾಮ ಸಹಾಯಕ ಅಮಸಿದ್ದ ಬನ್ನೆ, ಪೊಲೀಸ್ ಹಾಗೂ ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net