ಪಾಲಕರಿಗೆ ಆಹಾರ ಧಾನ್ಯ ವಿತರಣೆ

RVT 4-2
Published on

ರೇವತಗಾಂವ: ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಕರೊನಾ ವೈರಸ್ ಸೋಂಕು ತಡೆಗಟ್ಟುವ ಹಿನ್ನೆಲೆ ಶಾಲೆಗಳಿಗೆ ರಜೆ ನೀಡಿದ್ದರೂ ಮಾ.14 ರಿಂದ ಏ.10ರವರೆಗಿನ 21 ದಿನಗಳ ಮಧ್ಯಾಹ್ನದ ಅಕ್ಷರ ದಾಸೋಹದ ಆಹಾರ ಧಾನ್ಯವನ್ನು ಶಾಲೆ ಮುಖ್ಯಗುರು ಆರ್.ಎಸ್. ಬಿಳೂರ ಮಕ್ಕಳ ಪಾಲಕರಿಗೆ ವಿತರಿಸಿದರು.
ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಿರುವ ಮಾರ್ಕ್ ಮೇಲೆ ಸರತಿ ಸಾಲಿನಲ್ಲಿ ಪಾಲಕರನ್ನು ನಿಲ್ಲಿಸಿ ಪ್ರತಿ ವಿದ್ಯಾರ್ಥಿಗೆ ದಿನವೊಂದಕ್ಕೆ 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ 100 ಗ್ರಾಂನಂತೆ 21 ದಿನಕ್ಕೆ 2.1 ಕೆಜಿ ಅಕ್ಕಿ ಹಾಗೂ 6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ದಿನಕ್ಕೆ 150 ಗ್ರಾಂನಂತೆ 3.15 ಕೆಜಿ ಅಕ್ಕಿ ವಿತರಿಸಲಾಯಿತು.
ಶಾಲೆ ಎಸ್‌ಡಿಎಂಸಿ ಉಪಾಧ್ಯಕ್ಷ, ಸದಸ್ಯರು ಉಪಸ್ಥಿತರಿದ್ದರು. ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿ ಮಾಸ್ಕ್ ಹಾಗೂ ಹ್ಯಾಂಡ್ ಗ್ಲೌಸ್ ಧರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net