ಮತಗಟ್ಟೆಗಳಿಗೆ ಆಗಮಿಸಿದ ಚುನಾವಣೆ ಸಿಬ್ಬಂದಿ

RVT 26-2
Published on

ರೇವತಗಾಂವ: ಗ್ರಾಮದಲ್ಲಿ ನಡೆಯಲಿರುವ 2ನೇ ಹಂತದ ಗ್ರಾಪಂ ಚುನಾವಣೆಗಾಗಿ ಜಿಲ್ಲಾ ಹಾಗೂ ತಾಲೂಕಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಶನಿವಾರ ಮಧ್ಯಾಹ್ನವೇ ಚುನಾವಣಾಧಿಕಾರಿ ಡಾ. ಎಂ.ಎಸ್. ಮಾಗಿಣಗೇರಿ ನೇತೃತ್ವದ ತಂಡ ಇಲ್ಲಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆಗೆ ಆಗಮಿಸಿತು.

ಕೋವಿಡ್-19 ಹಿನ್ನೆಲೆ ಮುಂಜಾಗ್ರತೆ ಕ್ರಮ, ಕುಡಿಯುವ ನೀರು, ಶೌಚಗೃಹ, ಚುನಾವಣೆ ಸಿಬ್ಬಂದಿಗಾಗಿ ವಸತಿ, ಊಟೋಪಚಾರ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕೈಗೊಳ್ಳಲಾಗಿದೆ.

ಗ್ರಾಮದಲ್ಲಿ ನಾಲ್ಕು ಮತಕಟ್ಟೆಗಳನ್ನು ತೆರೆಯಲಾಗಿದೆ. ಬಿಎಲ್‌ಒಗಳು, ಬಿಸಿಯೂಟ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಸ್ವಯಂ ಸೇವಕರು ಸೇರಿದಂತೆ ಇತರ ಸಿಬ್ಬಂದಿಯನ್ನು ನೇಮಿಸಲಾಗಿದೆ.

ಸಹಾಯಕ ಚುನಾವಣೆ ಅಧಿಕಾರಿ ಎಸ್. ಐ. ಗಚ್ಚಿನಕಟ್ಟಿ, ಕೆ.ಎಸ್. ಧರ್ಮಪ್ಪ, ಆರ್.ಎಸ್. ಗೋಳಗಿ, ಶ್ರೀಮತಿ ಎಸ್.ಆರ್. ಜೀರ್, ಎಸ್.ಎಂ. ತೋಳನೂರ, ಪಿಎಸ್‌ಐ ಆರ್.ಕೆ. ವಾಲೀಕಾರ, ಎಂ. ಎಂ. ಹೊನಕಟ್ಟಿ, ಎಸ್.ಕೆ. ಪಾಗಲ್, ಎಸ್.ಜಿ. ಮುಚ್ಚಂಡಿ, ಗ್ರಾಮ ಸಹಾಯಕ ಅಮಸಿದ್ದ ಬನ್ನೆ ಮತ್ತಿತರರು ತಂಡದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net