

ಹೊಳೆನರಸೀಪುರ: ಮಹಾಗಣಪತಿ ಮಹೋತ್ಸವ ಸೇವಾ ಸಮಿತಿಯಿಂದ ಪ್ರತಿಷ್ಠಾಪಿಸಲಾಗಿರುವ 67ನೇ ವರ್ಷದ ಶ್ರೀ ಗಣೇಶ ಮೂರ್ತಿ ವಿಸರ್ಜನೆ ಮುನ್ನ ದಿನವಾದ ಶನಿವಾರ ಶಾಸಕ ಎಚ್.ಡಿ.ರೇವಣ್ಣ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿಸಿ, ಸಾರ್ವಜನಿಕರಿಗೆ ತೀರ್ಥ ಪ್ರಸಾದ ನೀಡಲಾಯಿತು.
ಶನಿವಾರ ಬೆಳಗ್ಗೆ ಗಣೇಶನ ಪುಟ್ಟ ಬೆಳ್ಳಿ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ ಮಾಡಲಾಯಿತು. ಸಮಿತಿಯ ಗೌರವಾಧ್ಯಕ್ಷ ಟಿ. ಶಿವಕುಮಾರ್ ವಿವಿಧ ಬಗೆಯ ಹೂವುಗಳಿಂದ ಉತ್ಸವದ ರಥವನ್ನು ಅಲಂಕರಿಸಿದರು. ರಾಘವೇಂದ್ರ ಮಠದ ಪ್ರಧಾನ ಅರ್ಚಕ ಶ್ರೀಶಾಚಾರ್ ಹಾಗೂ ರಮೇಶ್ ಐತಾಳ್ ಪೂಜೆ ನೆರವೇರಿಸಿದರು.
ಪುರಸಭಾ ಸದಸ್ಯ ಎ.ಜಗನ್ನಾಥ್, ಪುರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಸುದರ್ಶನ್, ಪುರಸಭೆ ಮುಖ್ಯಾಧಿಕಾರಿ ನಾಗೇಂದ್ರ ಕುಮಾರ್, ಐಪಿಎಸ್ ಅಧಿಕಾರಿ ಶಾಲೂ, ನಗರಠಾಣೆ ಎಸ್.ಐ.ಅಭಿಜಿತ್, ಅಪರಾಧ ವಿಭಾಗದ ಎಸ್.ಐ.ರಂಗಸ್ವಾಮಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ವಿ. ಸುರೇಶ್ ಕುಮಾರ್, ಶ್ರೀ ಮಹಾಗಣಪತಿ ಸೇವಾ ಸಮಿತಿಯ ಗೌರಾವಾಧ್ಯಕ್ಷ ಟಿ. ಶಿವಕುಮಾರ್, ಅಧ್ಯಕ್ಷ ಕೆ.ಶ್ರೀಧರ್, ಕಾರ್ಯಾಧ್ಯಕ್ಷ ಎಚ್.ಎಸ್.ಪುಟ್ಟಸೋಮಪ್ಪ, ಉದ್ಯಮಿ ದೊಡ್ಡಮಲ್ಲಣ್ಣ ಇತರರು ಇದ್ದರು.