ರೇವಡಿಹಾಳದಲ್ಲಿ ಗುರುಪೂರ್ಣಿಮೆ

Screenshot_20250707-103439_1.jpg
Published on

ಹುಬ್ಬಳ್ಳಿ: ತಾಲೂಕಿನ ರೇವಡಿಹಾಳ ಮಹಾಬಲೇಶ್ವರ ಲೇಔಟ್ ನಲ್ಲಿರುವ ಶ್ರೀ ಸಾಯಿ ಮಂದಿರದಲ್ಲಿ ಜುಲೈ 10ರಂದು ಗುರು ಪೂರ್ಣಿಮೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

ಬೆಳಗ್ಗೆ 7ಕ್ಕೆ ಮಹಾಗಣಪತಿ ಮತ್ತು ಶಿರಡಿ ಸಾಯಿ ಬಾಬಾ, ಶನೈಶ್ಚರ್ ಸ್ವಾಮಿಗೆ ಮಹಾಸಂಕಲ್ಪ, ಮಹಾರುದ್ರಾಭಿಷೇಕ, ಕ್ಷಿರಾಭಿಷೇಕ, ಪಂಚಾಮೃತ ಅಭಿಷೇಕ ಮತ್ತು ಸತ್ಯನಾರಾಯಣ ಪೂಜೆ, ಬೃಹಸ್ಪತಿ ಹೋಮ ಹಾಗೂ ಮಹಾಪ್ರಸಾದ ಏರ್ಪಡಿಸಲಾಗಿದೆ.

ಸಂಜೆ 5ಕ್ಕೆ ಗುರುವಂದನೆ ಹಾಗೂ ಅಭಿನಂದನೆ, ದಾನಿಗಳಿಗೆ ಗುರುರಕ್ಷೆ ನಡೆಯಲಿದೆ. ರಾಯನಾಳ ವಿರಕ್ತಮಠದ ಶ್ರೀ ಅಭಿನವ ರೇವಣಸಿದ್ದೇಶ್ವರ ಸ್ವಾಮೀಜಿ, ರೇವಡಿಹಾಳ ದಯಾನಂದ ಭಾರತಿ ವಿದ್ಯಾರಣ್ಯ ಗುರುಕುಲದ ಸ್ವಾಮಿ ಚಿದ್ರೂಪಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಗೋಕುಲದ ವೇದಮೂರ್ತಿ ಹಾಲಯ್ಯ ಸ್ವಾಮೀಜಿ ನೇತೃತ್ವ ವಹಿಸುವರು. ಮಾಜಿ ಸಿಎಂ ಜಗದೀಶ ಶೆಟ್ಟರ್ ಅಧ್ಯಕ್ಷತೆ ವಹಿಸುವರು. ಬೆಳಗಾವಿಯ ಡಾ. ಚಂದ್ರಶೇಖರ ಶಾಸ್ತ್ರಿಗಳು ಹಿರೇಮಠ, ಪ್ರೊ. ಶಿವಪ್ರಕಾಶ ಬಳಿಗೇರ ಪಾಲ್ಗೊಳ್ಳುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net