

ಕಾರ್ಕಳ: ಉದ್ಯೋಗದ ನಿಮಿತ್ತ ದುಬೈಗೆ ತೆರಳಿದ್ದ ಯುವಕನೊಬ್ಬ ಸರ್ಕಾರದ ದಿಗ್ಭಂಧನದಿಂದಾಗಿ ಆರು ವರ್ಷಗಳ ಕಾಲ ತಾಯ್ನಾಡಿಗೆ ಬರಲು ಸಾಧ್ಯವಾಗದೆ ಸಂದಿಗ್ಧ ಪರಿಸ್ಥಿತಿ ಎದುರಿಸಿದ್ದರು. ಇದೀಗ ಕಾರ್ಕಳ ಶಾಸಕ ವಿ.ಸುನೀಲ್ಕುವಾರ್ ಪ್ರಯತ್ನದಿಂದ ತಾಯ್ನಾಡಿಗೆ ಸುರಕ್ಷಿತವಾಗಿ ವಾಪಸ್ ಬಂದಿದ್ದಾರೆ. ಕಾರ್ಕಳ ತಾಲೂಕಿನ ತೆಳ್ಳಾರು ನಿವಾಸಿ ಸಂದೀಪ್ ಎಂಬ ಯುವಕ ಆರು ವರ್ಷಗಳ ಹಿಂದೆ ಉದ್ಯೋಗ ಅರಸಿಕೊಂಡು ಮಂಗಳೂರು ಶಕ್ತಿನಗರ ಮೂಲದ ವ್ಯಕ್ತಿಯೊಬ್ಬರ ಮೂಲಕ ದುಬೈಗೆ ತೆರಳಿದ್ದರು. ಅವರ ಮೇಲಿನ ನಂಬಿಕೆಯಿಂದ ಸಂದೀಪ್ ತನ್ನ ವೀಸಾ ಐಡಿ ಕೊಟ್ಟು ತೊಂದರೆಗೆ ಸಿಲುಕಿಕೊಂಡರು. ಸರ್ಕಾರ ವಿಧಿಸಿದ ದುಬಾರಿ ದಂಡ ಪಾವತಿಸಲಾಗದೆ ಅಸಹಾಯಕರಾಗಿದ್ದರು. ಮನೆ ಮಂದಿ ಮಗನನ್ನು ಊರಿಗೆ ಕರೆ ತರಲು ಸಾಕಷ್ಟು ಪ್ರಯತ್ನಗಳನ್ನು ನಡೆಸಿದ್ದರೂ ಸಾಧ್ಯವಾಗಿರಲಿಲ್ಲ. ಆರು ತಿಂಗಳ ಹಿಂದೆ ಸಂದೀಪ್ ಅವರ ತಾಯಿ ಸುನಂದಾ ಶಾಸಕ ವಿ.ಸುನೀಲ್ಕುವಾರ್ ಅವರ ಕಚೇರಿಗೆ ತೆರಳಿ ಮಗನನ್ನು ವಾಪಸ್ ಊರಿಗೆ ಕರೆತರುವಂತೆ ಮನವಿ ಮಾಡಿದ್ದರು. ಕೂಡಲೇ ಶಾಸಕರು ಸ್ಪಂದಿಸಿ ದುಬೈನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಸಂದೀಪ್ನನ್ನು ತಾಯ್ನಡಿಗೆ ಕರೆತಂದಿದ್ದಾರೆ.
ಶಾಸಕರು ದುಬೈನಲ್ಲಿ ನೆಲೆಸಿರುವ ಸ್ನೇಹಿತ ಪ್ರತಾಪ್ ಶೆಟ್ಟಿ ಅವರನ್ನು ಸಂಪರ್ಕಿಸಿ ಲಕ್ಷಾಂತರ ರೂ. ಮೊತ್ತದ ದಂಡ ಕಡಿತಗೊಳಿಸಿದರು. ಬಾಕಿಯಿದ್ದ ಮೊತ್ತವನ್ನು ಶಾಸಕರೇ ಪಾವತಿಸಿದರು. ನಂತರ ಎಲ್ಲ ರೀತಿಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದು, ಶಾಸಕ ಸುನೀಲ್ ಕುವಾರ್ ಪ್ರಯತ್ನಕ್ಕೆ ದುಬೈನಲ್ಲಿರುವ ಪ್ರತಾಪ್ ಶೆಟ್ಟಿ ಸಹಕರಿಸಿದರು. ಇದರಿಂದಾಗಿ ಆರು ವರ್ಷಗಳ ಕಾಲ ವಿದೇಶದಲ್ಲಿ ಸಿಲುಕಿದ್ದ ಯುವಕ ತನ್ನೂರಿಗೆ ಮರಳುವಂತಾಗಿದೆ. ಶಾಸಕರ ತ್ವರಿತ ಸ್ಪಂದನೆಗೆ ಕುಟುಂಬ ಕೃತಜ್ಞತೆ ಸಲ್ಲಿಸಿದೆ.
ಆರು ವರ್ಷಗಳಿಂದ ಸಂಕಷ್ಟಕ್ಕೆ ಸಿಲುಕಿದ್ದೆ. ಶಾಸಕ ಸುನೀಲ್ಕುವಾರ್ ಹಾಗೂ ಪ್ರತಾಪ್ ಶೆಟ್ಟಿ ಸಹಕಾರದಿಂದ ನಾನು ಸುರಕ್ಷಿತವಾಗಿ ಮನೆಗೆ ಮರಳಿದ್ದೇನೆ. ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ. ನನ್ನ ಹಾಗೆ ಯಾರು ಕೂಡ ವೀಸಾ ಕೊಟ್ಟು ಮೋಸ ಹೋಗಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ವಾಡಿಕೊಳ್ಳುತ್ತೇನೆ. ಸಂದೀಪ್, ಊರಿಗೆ ಮರಳಿದ ಯುವಕ ಆರು ತಿಂಗಳ ಹಿಂದೆ ತೆಳ್ಳಾರಿನ ನಿವಾಸಿ ಸುನಂದ ಎಂಬವರು ತಮ್ಮ ಮಗನ ಸಂಕಷ್ಟದ ಸ್ಥಿತಿಯ ಬಗ್ಗೆ ನನ್ನ ಗಮನಕ್ಕೆ ತಂದರು. ಈ ಬಗ್ಗೆ ವಾತುಕತೆ ನಡೆಸಿ, ದುಬೈನಲ್ಲಿರುವ ಪ್ರತಾಪ್ ಶೆಟ್ಟಿ ಸಹಕಾರದಿಂದ ಯುವಕನನ್ನು ಮತ್ತೆ ತಾಯ್ನಾಡಿಗೆ ಕರೆತರಲಾಗಿದೆ. ವಿ.ಸುನೀಲ್ಕುವಾರ್, ಕಾರ್ಕಳ ಶಾಸಕ https://www.vijayavani.net/jci-dundubhi-interim-conference-in-nitte https://www.vijayavani.net/alumni-donate-water-unit-to-college