ಗ್ರಾಮ ಪಂಚಾಯಿತಿ ಸ್ವತ್ತು ವಾಪಸ್ ತಲುಪಿಸಿ

KDR protest
ಕಡೂರು ತಾಲೂಕಿನ ಪುರ ಗ್ರಾಪಂ ಕಚೇರಿ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ವಿನಾಯಕ್, ರವಿ ಪ್ರಕಾಶ್, ವಿಜಯ್, ಅಭಿಷೇಕ್ ಇತರರಿದ್ದರು.
Published on

ಕಡೂರು: ಗ್ರಾಮ ಪಂಚಾಯಿತಿಯಿಂದ ಕಾಣೆಯಾಗಿರುವ ಜನರೇಟರ್, ಪೈಪುಗಳು ಮತ್ತು ಕಲ್ಲುಗಳನ್ನು ಮರಳಿ ಗ್ರಾಪಂಗೆ ತಂದು ಹಾಕುವವರೆಗೆ ಸಾಮಾನ್ಯ ಸಭೆ ನಡೆಸದಂತೆ ಯಗಟಿಪುರ ಗ್ರಾಪಂಗೆ ನೂರಾರು ಗ್ರಾಮಸ್ಥರು ಬುಧವಾರ ಮುತ್ತಿಗೆ ಹಾಕಿ ಅಧ್ಯಕ್ಷೆ ವಿರುದ್ಧ ಪ್ರತಿಭಟನೆ ನಡೆಸಿದರು.

ಪುರ ಗ್ರಾಪಂನಲ್ಲಿ ಸುಮಾ ಮಹೇಶ್ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ಸಾಮಾನ್ಯ ಸಭೆ ಕರೆಯಲಾಗಿತ್ತು. ಸಭೆ ಆರಂಭವಾಗುವ ಸಂದರ್ಭದಲ್ಲಿ ಗ್ರಾಪಂ ಬಳಿ ಗ್ರಾಮಸ್ಥರು ಆಗಮಿಸಿದರು. ಗ್ರಾಪಂ ಅಧ್ಯಕ್ಷೆಯ ಪತಿ ಗ್ರಾಪಂನ ಹಲವು ವಸ್ತುಗಳನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ. ಅವರ ವಿರುದ್ಧ ಜಿಲ್ಲಾಧಿಕಾರಿ, ಜಿಪಂ ಸಿಇಒ ಮತ್ತು ತಾಪಂ ಇಒ ಅವರಿಗೆ ದೂರು ನೀಡಲಾಗಿದೆ. ಅವರು ಪರಿಶೀಲನೆ ನಡೆಸುವುದಾಗಿ ಭರವಸೆ ಕೊಟ್ಟಿದ್ದಾರೆ. ಹಾಗಾಗಿ ತನಿಖೆ ಪೂರ್ಣಗೊಳ್ಳುವವರೆಗೆ ಸಾಮಾನ್ಯ ಸಭೆ ನಡೆಸಬಾರದು ಎಂದು ಪಟ್ಟು ಹಿಡಿದರು.
ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಯಗಟಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ಗ್ರಾಪಂನ ಬೆಲೆ ಬಾಳುವ ವಸ್ತುಗಳು ಕಾಣೆಯಾಗಿರುವ ಬಗ್ಗೆ ಅಧಿಕಾರಿಗಳು ಕೂಡಲೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಬಳಿಕ ಗ್ರಾಮಸ್ಥರ ಒತ್ತಾಯಕ್ಕೆ ಮಣಿದು ಸಭೆೆ ಮುಂದೂಡಲಾಯಿತು.
ಪ್ರತಿಭಟನೆಯಲ್ಲಿ ವಿನಾಯಕ್, ಮಹಾರಾಜ, ರವಿ ಪ್ರಕಾಶ್, ಕೋಡಿಹಳ್ಳಿ ವಿಜಯ್, ಸ್ವಾಮಿ, ಅಭಿಷೇಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net