ನಿವೃತ್ತಿ ಬಳಿಕ ಕಿನ್ನಾಳ ಕಲೆಯ ಪೋಷಣೆಯ ಪ್ರವೃತ್ತಿ

10 KAMPLI 02
ಅಲಂಕಾರಿಕ ಹಣ್ಣಿನಬುಟ್ಟಿ ತಯಾರಿಕೆಯಲ್ಲಿ ನಿರತ ಕಂಪ್ಲಿಯ ಕಿನ್ನಾಳ ಕಲೆ ಕರಕುಶಲಗಾರ ಷಣ್ಮುಖಪ್ಪ ಚಿತ್ರಗಾರ.
Published on

ಕಂಪ್ಲಿ: ಪಟ್ಟಣದ ನಿವಾಸಿ, ನಿವೃತ್ತ ಉಪಪ್ರಾಚಾರ್ಯ ಷಣ್ಮುಖಪ್ಪ ಚಿತ್ರಗಾರ ಕಿನ್ನಾಳ ಕರಕುಶಲ ಸಂಪ್ರಾದಾಯಿಕ ಸಾಮಗ್ರಿಗಳ ತಯಾರಿಕೆ ಮೂಲಕ ಗುರುತಿಸಿಕೊಂಡಿದ್ದಾರೆ. ಯೋಗ ಶಿಕ್ಷಣ, ಸಾಹಿತ್ಯ ಸೇವೆಯಲ್ಲೂ ನಿರತರಾಗಿದ್ದಾರೆ.

ಪರಂಪರಾನುಗತ ವೃತ್ತಿ ಕಲೆ ಮುಂದುವರಿಸಲು ಕಿನ್ನಾಳ ಕರಕುಶಲ ಕಲೆಯ ಮೂಲಕ ಸಾಮಗ್ರಿಗಳನ್ನು ತಯಾರಿಸುತ್ತಿದ್ದಾರೆ. ರಾಸಾಯನಿಕ ಬಣ್ಣ ನೆಚ್ಚಿಕೊಳ್ಳದೆ ನೈಸರ್ಗಿಕ ರೀತಿಯಲ್ಲಿ ಬಣ್ಣ ತಯಾರು ಮಾಡುತ್ತಾರೆ. ನೈಸರ್ಗಿಕ ಬಣ್ಣ ದೀರ್ಘಕಾಲ ಬಾಳಿಕೆ ಬರುವ ಜತೆ ನೈಜತೆ ನೀಡುತ್ತದೆ.

ಹಗುರವಾದ ಪೊಳಕಿ, ಅರಳಿ, ನುಗ್ಗೆಕಟ್ಟಿಗೆಗಳನ್ನು ಬಳಸಿ ಹಣ್ಣಿನಬುಟ್ಟಿ, ಅಲಂಕಾರಿಕ ಮಣೆ, ಗೋಡೆ ಫಲಕ, ಆನೆ, ಗುಬ್ಬಿ ಸೇರಿ ವಿವಿಧ ಜೀವಿಗಳು ಇವರ ಕೈಯಲ್ಲಿ ರೂಪ ಪಡೆಯುತ್ತಿವೆ. ನೈಜ ಹಣ್ಣುಗಳ ಹಾಗೆ ಕಾಣುವ ಹಣ್ಣಿನಬುಟ್ಟಿ ಆಕರ್ಷಕವಾಗಿದ್ದು, ಮನೆಯಲ್ಲಿ ತೂಗುಹಾಕಲು, ಅಲಂಕಾರಿಕವಾಗಿ ಇಡಲು, ಸನ್ಮಾನ ಸಂದರ್ಭದಲ್ಲಿ ನೀಡಲು ಉಪಯುಕ್ತವಾಗಿವೆ.

ವಿದ್ಯಾರ್ಥಿಗಳಿಗಾಗಿ ವಿಜ್ಞಾನದ ಮಾದರಿಗಳನ್ನು, ಶೈಕ್ಷಣಿಕ ಕಲಿಕೆಯ ಉಪಕರಣಗಳನ್ನು ತಯಾರಿಸುವ ಆಶಯ ಹೊಂದಿದ್ದಾರೆ. 40 ವರ್ಷಗಳ ಶಿಕ್ಷಕ ವೃತ್ತಿಯ ನಿವೃತ್ತಿ ನಂತರ ಕಸಾಪ ತಾಲೂಕು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಿನ್ನಾಳ ಸಂಪ್ರದಾಯಿಕ ವಸ್ತುಗಳ ತಯಾರಿಕೆಯೊಂದಿಗೆ ಪತಂಜಲಿ ಯೋಗ ಸಮಿತಿಯಲ್ಲಿ ಯೋಗ ಶಿಕ್ಷಕರಾಗಿ ಯೋಗ ಶಿಕ್ಷಣ ಸೇವೆ ಸಲ್ಲಿಸುತ್ತಿದ್ದಾರೆ.

ಕಿನ್ನಾಳ ಕರಕುಶಲಗಾರ, ಕಂಪ್ಲಿಷಣ್ಮುಖಪ್ಪ ಚಿತ್ರಗಾರಕಿನ್ನಾಳ ಕಲೆ ಅಪಾರ ಜನಮನ್ನಣೆಗಳಿಸಿದ್ದು, ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಿದೆ. ಈ ನಿಟ್ಟಿನಲ್ಲಿ ಕಿನ್ನಾಳ ಕಲೆ ಕುರಿತು ಆಸಕ್ತರಿಗೆ ತರಬೇತಿ ನೀಡುವ ಯೋಚನೆ ಇದೆ. ಕಿನ್ನಾಳ ಕಲೆಯಡಿ ತಯಾರಾದ ಸಾಮಗ್ರಿಗಳನ್ನು ಸರ್ಕಾರ ಕೊಂಡು ಕಲೆಯನ್ನು ಪೋಷಿಸಬೇಕು. ಕಿನ್ನಾಳ ಕಲೆಯ ರಕ್ಷಣೆಗಾಗಿ ಸರ್ಕಾರ ವಿಶೇಷ ಯೋಜನೆ ರೂಪಿಸುವ ಅಗತ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net