ನಿವೃತ್ತ ಯೋಧಗೆ ಅದ್ದೂರಿ ಸ್ವಾಗತ

hadagali yodha
ದಾಸರಹಳ್ಳಿ ತಾಂಡಾದಲ್ಲಿ ನಿವೃತ್ತ ಯೋಧ ಚಂದ್ರನಾಯ್ಕ ಅವರನ್ನು ಅದ್ದೂರಿ ಮೆರವಣಿಗೆಯೊಂದಿಗೆ ಸ್ವಾಗತಿಸಲಾಯಿತು.
Published on

ಹೂವಿನಹಡಗಲಿ: ಸೇನೆಯಲ್ಲಿ 30 ವರ್ಷ ಬಿಎಸ್‌ಎಫ್ ಯೋಧರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಎಲ್.ಚಂದ್ರನಾಯ್ಕ ಅವರನ್ನು ತಾಲೂಕಿನ ದಾಸರಹಳ್ಳಿ ತಾಂಡಾದ ಜನರು ಭಾನುವಾರ ಅದ್ದೂರಿ ಮೆರವಣಿಗೆ ನಡೆಸುವ ಮೂಲಕ ಸ್ವಾಗತಿಸಿದರು.

ಚಂದ್ರನಾಯ್ಕ ಮಾತನಾಡಿ, ದೇಶ ಸೇವೆ ಮಾಡುವುದು ಪುಣ್ಯದ ಕೆಲಸ. ಯುವ ಜನತೆ ದುಶ್ಚಟಗಳಿಗೆ ಬಲಿಯಾಗದೆ ಕುಟುಂಬ ಹಾಗೂ ದೇಶದ ಜವಾಬ್ದಾರಿಗಳನ್ನು ಗಮನದಲ್ಲಿಟ್ಟುಕೊಂಡು ಸಾಧನೆ ಮಾಡಬೇಕು ಎಂದರು.

ತಾಂಡಾದ ಠಕರಿ ಬನಕಿ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಗ್ರಾಮದವರೆಲ್ಲ ಒಟ್ಟಾಗಿ ಯೋಧನಿಗೆ ಸನ್ಮಾನ ಮಾಡಿದರು. ಶ್ರೀ ಠಕರಿ ಬನಕಿದೇವಿ ಗ್ರಾಮಾಭಿವೃದ್ಧಿ ಸಂಘದ ಅಧ್ಯಕ್ಷ ಚಂದ್ರನಾಯ್ಕ, ದೈವಸ್ಥರಾದ ಕುಬ್ಯಾನಾಯ್ಕ, ಕುಬೇಂದ್ರನಾಯ್ಕ, ಹತ್ತಿನಾಯ್ಕ, ಉನ್ಯನಾಯ್ಕ, ರೈತಸಂಘದ ಅಧ್ಯಕ್ಷ ಮಂಜುನಾಯ್ಕ, ನೌಕರರ ಸಂಘದ ಸದಸ್ಯರಾದ ಧರ್ಮನಾಯ್ಕ, ರಾಜಕುಮಾರ್ ನಾಯ್ಕ, ಮುನಿಯಾ ನಾಯ್ಕ, ಉಮೇಶ್, ಪೂರ್ಯನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net