

ಕೊಕ್ಕರ್ಣೆ: ಕುರ್ಪಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತ ಶಿಕ್ಷಕರಾದ ಸತೀಶ್ ಶೆಟ್ಟಿ ಹಾಗೂ ನಾರಾಯಣ ಶೆಟ್ಟಿ ಅವರನ್ನು ಎಸ್‌ಡಿಎಂಸಿ, ಊರವರು ಹಾಗೂ ಹಳೇ ವಿದ್ಯಾರ್ಥಿಗಳ ವತಿಯಿಂದ ಇತ್ತೀಚೆಗೆ ಸನ್ಮಾನಿಸಲಾಯಿತು.
ಕರ್ಜೆ ಗ್ರಾ.ಪಂ. ಅಧ್ಯಕ್ಷ ಇನಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಉದ್ಯಮಿ ಸುರೇಶ್ ಶೆಟ್ಟಿ ತಡಾಲು, ಅಶೋಕ ಕುಮಾರ್ ಶೆಟ್ಟಿ, ನಿತ್ಯಾನಂದ ಶೆಟ್ಟಿ, ದೇವಣ್ಣ ನಾಯಕ್, ಪ್ರಶಾಂತ ಶೆಟ್ಟಿ, ಸಾಧು ಸೇರಿಗಾರ್, ಶಾಂತರಾಜ ಶೆಟ್ಟಿ, ಸುಮಿತ್ರಾ, ಸುಮಿತ್ರಾ ಶಂಕರ ನಾಯಕ್, ಮಾಲತಿ, ದಿನೇಶ್ ಉಪಸ್ಥಿತರಿದ್ದರು. ಮಲ್ಲಿಕಾ ಶೆಟ್ಟಿ ಸ್ವಾಗತಿಸಿದರು. ಪ್ರಸನ್ನ ಕುರ್ಪಾಡಿ, ಪೂರ್ಣಚಂದ್ರ ಸನ್ಮಾನ ಪತ್ರ ವಾಚಿಸಿದರು. ಜಗದೀಶ ಕುರ್ಪಾಡಿ ವಂದಿಸಿದರು. ದೀಕ್ಷಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.