ಶಿಕ್ಷಕರ ಮೇಲಿದೆ ಮಕ್ಕಳ ಭವಿಷ್ಯ ರೂಪಿಸುವ ಹೊಣೆ

07 kem 1
ಕೆಂಭಾವಿ ಏವೂರದಲ್ಲಿ ಭಾನುವಾರ ಏರ್ಪಡಿಸಿದ್ದ ನಿವೃತ್ತ ಶಿಕ್ಷಕರ ಸನ್ಮಾನ ಹಾಗೂ ವರ್ಗಾವಣೆಗೊಂಡ ಶಿಕ್ಷಕರ ಬೀಳ್ಕೊಡುಗೆ ಕಾರ್ಯಕ್ರಮವನ್ನು ನಿವೃತ್ತ ಡಿಡಿಪಿಐ ಶಾಂತಗೌಡ ಪಾಟೀಲ್ ಉದ್ಘಾಟಿಸಿದರು. ಹನುಮಾಕ್ಷಿ ಗೋಗಿ, ಗೌಡಪ್ಪಗೌಡ ಕಾಮನೆಟಗಿ, ಮಲ್ಲನಗೌಡ ಪಾಟೀಲ್, ರಾಜು ಧಣಿ, ಕೃಷ್ನಯ್ಯ ಗುತ್ತೇದಾರ್ ಇತರರಿದ್ದರು.
Published on

ಕೆಂಭಾವಿ: ಮಕ್ಕಳಲ್ಲಿ ಆತ್ಮಾಭಿಮಾನ, ಆತ್ಮವಿಶ್ವಾಸ, ಧೈರ್ಯ ಹಾಗೂ ಜ್ಞಾನವನ್ನು ನೀಡಿ ಭವಿಷ್ಯ ರೂಪಿಸುವ ಹೊಣೆ ಶಿಕ್ಷಕರ ಮೇಲಿದೆ ಎಂದು ಖ್ಯಾತ ಇತಿಹಾಸ ತಜ್ಞೆ ಹನುಮಾಕ್ಷಿ ಗೋಗಿ ಹೇಳಿದರು.

ಏವೂರ ಗ್ರಾಮದಲ್ಲಿ ಭಾನುವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಢ ಶಾಲೆ ಹಾಗೂ ಗ್ರಾಮದ ಹಳೆಯ ವಿದ್ಯಾರ್ಥಿಗಳಿಂದ ಏರ್ಪಡಿಸಿದ್ದ ನಿವೃತ್ತ ಶಿಕ್ಷಕರ ಸನ್ಮಾನ ಹಾಗೂ ವರ್ಗಾವಣೆಗೊಂಡ ಶಿಕ್ಷಕರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾ ದಾನ ಎಲ್ಲ ದಾನಗಳಿಗೂ ಅತ್ಯಂತ ಶ್ರೇಷ್ಠವಾಗಿದ್ದು, ಅದನ್ನು ಕಲಿಸುವಾಗ ಶಿಕ್ಷಕರು ಶ್ರದ್ಧೆಯಿಂದ ಮಕ್ಕಳಿಗೆ ಪಾಠ ಮಾಡಿದರೆ ಅಷ್ಟೇ ಶ್ರದ್ಧೆಯಿಂದ ವಿದ್ಯಾರ್ಥಿಗಳು ಆಲಿಸಬೇಕು ಎಂದು ಕಿವಿಮಾತು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಶಾಂತಗೌಡ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿ, ಭಾರತ ಗುರು ಪರಂಪರೆ ಹೊಂದಿರುವ ದೇಶ, ಪ್ರಾಚೀನ ಕಾಲದಿಂದಲೂ ಗುರುವಿಗೆ ಅತ್ಯಂತ ಶ್ರೇಷ್ಠ ಸ್ಥಾನ ನೀಡಲಾಗಿದ್ದು, ಗುರುವಿನ ಮಹತ್ವವನ್ನು ರಾಮಾಯಣ ಮಹಾಭಾರತದಂಥಾ ಮಹಾನ್ ಕಥೆಗಳಲ್ಲಿ ನಾವು ಕೇಳಿ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಗ್ರಾಮದ ಮುಖಂಡ ಮಲ್ಲನಗೌಡ ಪಾಟೀಲ್ ಮಾತನಾಡಿದರು. ಮರೆಪ್ಪ ಬಡಿಗೇರ ಪ್ರಾಸ್ತಾವಿಕ ಮಾತನಾಡಿದರು.

ಗೌಡಪ್ಪಗೌಡ ಕಾಮನೆಟಗಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಕಸ್ತೂರಿಬಾಯಿ, ರಾಜುಧಣಿ, ಸಂಗಯ್ಯ ಮಠಪತಿ, ಶಾಂತಗೌಡ ಪಾಟೀಲ್, ಜೀವನರಾವ ಕುಲಕರ್ಣಿ, ಮಹಾಂತಯ್ಯ ಹಿರೇಮಠ, ಕೃಷ್ಣಯ್ಯ ಗುತ್ತೇದಾರ, ಗೊಲ್ಲಾಳಪ್ಪ ಅಂಗಡಿ, ನಿಂಗಪ್ಪ ಪೂಜಾರಿ, ದೇವೇಂದ್ರ ಕರ್ನಾಳ, ಬಸವರಾಜ ಕುಮಸಗಿ, ಫತ್ರುನ್ನಿಸಾ ಬೇಗಂ, ಸಂಗಪ್ಪ ಪೂಜಾರಿ ಇದ್ದರು.

ಮುಖ್ಯಗುರು ವಿಠ್ಠಲ್ ಚೌವ್ಹಾಣ್ ನಿರೂಪಣೆ ಮಾಡಿದರು. ಕೆಎಂಎಫ್ ಜಂಟಿ ನಿರ್ದೇಶಕ ಚಂದ್ರಶೇಖರ ಪತ್ತಾರ್ ಸ್ವಾಗತಿಸಿದರು. ರಾಜಶೇಖರ ಪತ್ತಾರ್ ವಂದಿಸಿದರು.

ಏವೂರ ಗ್ರಾಮದ ಇತಿಹಾಸದ ಬಗ್ಗೆ ನಾನು ಡಾ.ಎಂ.ಎಂ.ಕಲಬುರಗಿ ಅವರ ಮಾರ್ಗದರ್ಶನದಲ್ಲಿ ಶಾಸನ ಶಾಸ್ತ್ರ ಅಧ್ಯಯನ ಮಾಡಿದೆ. ಇಲ್ಲಿನ ಸುಂದರ ಸ್ವಯಂಭೂ ಸೋಮೇಶ್ವರ ದೇವಾಲಯದಲ್ಲಿರುವ ಹಲವಾರು ಶಾಸನಗಳು ನಮ್ಮ ಇತಿಹಾಸವನ್ನು ಸಾರಿ ಹೇಳುತ್ತಿವೆ. ಕಲ್ಯಾಣ ಚಾಲುಕ್ಯರ ಕಾಲದ ಈ ದೇವಾಲಯದಲ್ಲಿ ಶಿಲ್ಪಕಲೆ, ಶಾಸನಗಳಿದ್ದು , ಅವುಗಳನ್ನು ಸಂರಕ್ಷಿಸಿ, ಐತಿಹಾಸಿಕ ಗ್ರಾಮವೆಂದು ಸರ್ಕಾರ ಘೋಷಣೆ ಮಾಡಬೇಕು.
| ಹನುಮಾಕ್ಷಿ ಗೋಗಿ. ಇತಿಹಾಸ ಸಂಶೋಧಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net