ನಿವೃತ್ತ ಸುಬೇದಾರ ಪ್ರಕಾಶಗೆ ಪ್ರಶಸ್ತಿ ಪ್ರದಾನ

27Jaggu9
ಬೆಳಗಾವಿಯ ಎಕ್ಸ್‌ಪರ್ಟ್ ಪಪೂ ಕಾಲೇಜಿನಿಂದ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ಸೇನಾಧಿಕಾರಿ ಸುಬೇದಾರ ಪ್ರಕಾಶ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ನಾಗೇಶ ದಂಡಾಪುರೆ, ತಹಸೀನ್‌ನಾಜ್ ಜಮಾದಾರ ಇತರರಿದ್ದರು.
Published on

ಬೆಳಗಾವಿ: ಭಾರತೀಯ ಸೇನೆಗೆ 1988ರಲ್ಲಿ ಸೇರಿ 30 ವರ್ಷ ಸೇವೆ ಸಲ್ಲಿಸಿದ ನಿವೃತ್ತ ಸುಬೇದಾರ ಪ್ರಕಾಶ ಪಾಟೀಲ ಅವರನ್ನು ನಗರದ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನಿಂದ ಆಯೋಜಿಸಲಾಗಿದ್ದ 25ನೇ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಅತಿಥಿಯಾಗಿ ಆಗಮಿಸಿದ್ದ ಎಕ್ಸ್‌ಪರ್ಟ್ ಪಿಯು ಕಾಲೇಜು ಸಂಸ್ಥಾಪಕ ನಾಗೇಶ ದಂಡಾಪುರೆ ಮಾತನಾಡಿ, ದೇಶ ರಕ್ಷಣೆಯಲ್ಲಿ ಸೈನಿಕರ ಪಾತ್ರ ಪ್ರಮುಖವಾಗಿದೆ. ಅವರಂತೆ ವಿದ್ಯಾರ್ಥಿಗಳು ದೇಶಪ್ರೇಮ ಹೊಂದಬೇಕು ಎಂದರು. ಪ್ರಕಾಶ ಪಾಟೀಲ ಅವರು ಆಪರೇಷನ್ ರಕ್ಷಕ-2006 ಜಮ್ಮು ಕಾಶ್ಮೀರದ ಕೂಪವಾಡ ಸೆಕ್ಟರ್ 41 ರಾಷ್ಟ್ರೀಯ ರೈಫಲ್ಸ್ನಲ್ಲಿ ಗಸ್ತು ಸಂದರ್ಭದಲ್ಲಿ ಭಯೋತ್ಪಾದಕರ 30 ಗುಂಡಿನಿಂದ ಗಾಯಗೊಂಡು ಬಲಗೈ ಕಳೆದುಕೊಂಡು ಜೀವನ್ಮರಣದ ಮಧ್ಯೆ ಹೋರಾಡಿ ಮರುಜೀವ ಪಡೆದಿದ್ದಾರೆ. ಮತ್ತೆ 12 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ ಎಂದರು. ಪ್ರಾಚಾರ್ಯ ತಹಸೀನ್‌ನಾಜ್ ಜಮಾದಾರ, ಕಾರ್ಯನಿರ್ವಾಹಕ ಮೈಲಾರ್ ಟೆನಗಿ, ಉಪಪ್ರಾಚಾರ್ಯ ಸಂಜೀವ ಕರುವಿನಕೊಪ್ಪ, ಉಪನ್ಯಾಸಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net