ವಿದ್ಯಾರ್ಥಿಗಳ ಸಾಧನೆಗೆ ಗುರಿ ಅಗತ್ಯ

Untitled design (18)
Published on

ಸಿಂಧನೂರು: ಭವ್ಯ ಭಾರತ ನಿರ್ಮಾಣದಲ್ಲಿ ವಿವೇಕಾನಂದರ ಪಾತ್ರ ಮಹತ್ವದ್ದಾಗಿದೆ. ಅವರ ಆದರ್ಶಗಳು ಸರ್ವಕಾಲಿಕವಾಗಿದ್ದರಿಂದ ನಮ್ಮಂತಹವರು ಭಾರತದ ಸೇನೆಗೆ ಸೇರಲು ಪ್ರೇರಕ ಎಂದು ನಿವೃತ್ತ ಸೈನಿಕ ನಾಗರಾಜ ತುರ್ವಿಹಾಳ ಹೇಳಿದರು.

ತುರ್ವಿಹಾಳ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ರಾಷ್ಟ್ರೀಯ ಯುವ ದಿನ ಮತ್ತು ಭಾರತೀಯ ಸೇನಾ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳ ಸಾಧನೆಗೆ ಗುರಿ, ಉದ್ದೇಶ ಇರಬೇಕು ಎಂದ ಅವರು, ಸೈನ್ಯದಲ್ಲಿರುವ ಉದ್ಯೋಗಾವಕಾಶಗಳನ ಕುರಿತು ಮಾಹಿತಿ ನೀಡಿದರು.

ಸಮಕಾಲಿನ ಸಮಾಜಕ್ಕೆ ಸ್ವಾಮಿ ವಿವೇಕಾನಂದರ ವಿಚಾರಧಾರೆಯ ಪ್ರಸ್ತುತತೆ ವಿಷಯ ಕುರಿತು ಆಂಗ್ಲ ವಿಭಾಗದ ಮುಖ್ಯಸ್ಥ ಡಾ.ಚನ್ನಬಸವ ಉಪನ್ಯಾಸ ನೀಡಿ, ಹಸಿವಿನ ಪ್ರಜ್ಞೆಯಿಂದ ಮನುಷ್ಯನು ಜ್ಞಾನ ಮಾರ್ಗ ಹಿಡಿಯಲು ಸಾಧ್ಯ ಎಂದರು.

ಕನ್ನಡ ವಿಭಾಗ ಮುಖ್ಯಸ್ಥ ಮೌಲಾಸಾಬ್ ಮಾತನಾಡಿದರು. ಪ್ರಾಚಾರ್ಯ ಡಾ.ಖಾದರಬಾಷಾ ಅಧ್ಯಕ್ಷತೆ ವಹಿಸಿದ್ದರು. ಡಾ.ವೆಂಕಟರಮಣ, ಸಹಾಯಕ ಪ್ರಾಧ್ಯಾಪಕರಾದ ರಾಜೇಶ ಎನ್., ಹನುಮೇಶ, ಗಂಗಾಬಾಯಿ, ಸುಭಾಷ್, ವೀರೇಶ, ಹುಲುಗಪ್ಪ, ಬಸಪ್ಪ, ಮಹಾದೇವ, ಭೀಮಾಶಂಕರ, ರಾಮಪ್ರಸಾದ ಇದ್ದರು. ಸುನೀತಾ, ಶರಣಬಸವ, ಶಶಿಕಲಾ ನಿರ್ವಹಿಸಿದರು. ಭಾಷಣ ಮತ್ತು ರಸಪ್ರಶ್ನೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net