ಹೆಜ್ಜೇನು ದಾಳಿಗೆ ಬಲಿಯಾದ ನಿವೃತ್ತ ಯೋಧ; ಇಬ್ಬರಿಗೆ ಗಾಯ..

death
ಸಾಂದರ್ಭಿಕ ಚಿತ್ರ
Published on

ಹೊಸದುರ್ಗ: ಹೆಜ್ಜೇನು ದಾಳಿಯಿಂದಾಗಿ ನಿವೃತ್ತ ಯೋಧರೊಬ್ಬರು ಸಾವಿಗೀಡಾಗಿದ್ದಲ್ಲದೆ, ಇಬ್ಬರು ಗಾಯಗೊಂಡಿರುವ ಪ್ರಕರಣ ನಡೆದಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಇಂಥದ್ದೊಂದು ದುರಂತ ಸಂಭವಿಸಿದೆ.

ಜಿಲ್ಲೆಯ ಹೊಸದುರ್ಗದ ಕಡವಿಗೆರೆ ಎಂಬಲ್ಲಿ ಕೃಷಿ ಕೆಲಸದಲ್ಲಿದ್ದ ಜನರ ಮೇಲೆ ಹೆಜ್ಜೇನು ದಾಳಿ ಮಾಡಿತ್ತು. ಈ ಸಂದರ್ಭದಲ್ಲಿ ನಿವೃತ್ತ ಯೋಧ ಸುರೇಂದ್ರ ಸಿಂಗ್ (60) ಸಾವಿಗೀಡಾಗಿದ್ದಾರೆ.

ಹೆಜ್ಜೇನು ಕಡಿತದಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಸುರೇಂದ್ರ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹೆಜ್ಜೇನು ದಾಳಿಗೆ ಸಿಲುಕಿದ್ದ ಇನ್ನಿಬ್ಬರು ಚೇತರಿಸಿಕೊಂಡಿದ್ದಾರೆ.

ಸುರೇಂದ್ರ ಸಿಂಗ್ ಸೇನೆಯಿಂದ ನಿವೃತ್ತಿಯಾದ ನಂತರ ಸ್ವಗ್ರಾಮ ಕಡವಿಗೆರೆಗೆ ಹಿಂದಿರುಗಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ಇಲ್ಲಿನ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net