

ಮಂಡ್ಯ: ದಿನದಿಂದ ದಿನಕ್ಕೆ ಕಲುಷಿತಗೊಳ್ಳುತ್ತಿರುವ ಪರಿಸರವನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಶ್ರೀರಂಗಪಟ್ಟಣ ತಾಲೂಕು ಕೊಡಿಯಾಲ ಗ್ರಾಮದ ಎಲ್‌ಐಸಿ ನಿವೃತ್ತ ಅಧಿಕಾರಿ ಕೆ.ವಿ.ವೆಂಕಟೇಶ್ ಮನವಿ ಮಾಡಿದರು.
ಭೂತಾಯಿಗೆ ಕಿರುಕಾಣಿಕೆ ಕೊಡುವ ನಿಟ್ಟಿನಲ್ಲಿ ಪರಿಸರದ ಸಂರಕ್ಷಣೆ ಕೆಲಸವನ್ನು ನಿರಂತರಾಗಿ ಮಾಡುತ್ತಾ ಬಂದಿದ್ದೇನೆ. ಅಂತೆಯೇ ಕಳೆದ ನಾಲ್ಕು ವರ್ಷದಿಂದ ಶಾಲೆಗಳಿಗೆ ತೆಂಗು ಹಾಗೂ ಹಣ್ಣಿನ ಗಿಡಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದರೆ, ಮರ ಗಿಡಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ ಎಂದು ಆತಂಕ ವ್ಯಕ್ತಪಡಿಸಿದರು.
ಕೊಡಿಯಾಲದ ಗ್ರಾಮದ ವಿ.ಜಿ.ಶ್ರೀಧರ್ ಇದ್ದರು.