ಪದ್ಮಶ್ರೀ ಪುರಸತರ ಸಾಧನೆ ಸ್ಫೂರ್ತಿಯಾಗಲಿ: ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ಅಭಿಮತ

Function
Published on

ಬೆಂಗಳೂರು: ನಮ್ಮ ನಮ್ಮ ಕ್ಷೇತ್ರಗಳಲ್ಲಿ ಮುಂದುವರಿಯುತ್ತಿದ್ದೇವೆ, ಸಾಧನೆಯನ್ನೂ ಮಾಡಿದ್ದೇವೆ. ಆದರೆ ಸಮಾಜಕ್ಕೆ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದರೆ ಒಂದು ಕ್ಷಣ ಯೋಚಿಸಿ ಬಿಡುತ್ತೇವೆ. ಇದಕ್ಕೆ ಉತ್ತರವಾಗಿ ನಮ್ಮ ಮುಂದೆ ಪದ್ಮಶ್ರೀ ಪುರಸತರಿದ್ದಾರೆ. ಅವರ ಸಾಧನೆ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ತಿಳಿಸಿದ್ದಾರೆ.

ಸಮಂಜಸ ತಂಡದ ವತಿಯಿಂದ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಶನಿವಾರ ಆಯೋಜಿಸಿದ್ದ ಪದ್ಮಶ್ರೀ ಪುರಸ್ಕೃತರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ದುಡ್ಡು ಮಾಡಬೇಕೆಂಬ ಸ್ವಾರ್ಥಕ್ಕೆ ಸಿಲುಕಿ ವೃತ್ತಿಪರತೆಯನ್ನೇ ಮರೆಯುತ್ತಿರುವ ಕಾಲಟ್ಟದಲ್ಲಿದ್ದೇವೆ. ವೈದ್ಯಕಿಯ ವೃತ್ತಿ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ರಾಕ್ಷಸತೆ ಹೆಚ್ಚುತ್ತಿದೆ. ಮೂರು ಪಟ್ಟು ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಸಾಮಾನ್ಯ ಜನರು ಏನೂ ಮಾಡಲಾಗದ ಪರಿಸ್ಥಿತಿಗೆ ತಲುಪುತ್ತಾರೆ. ಸರ್ಕಾರಿ ಆಸ್ಪತ್ರೆಗಳಿಗೆ ಜನರ ಉಪಯೋಗಕ್ಕಾಗಿ ಸಾಕಷ್ಟು ಅನುದಾನ ಮೀಸಲಿಡಲಾಗುತ್ತದೆ. ಆದರೆ ವೈದ್ಯರು ಬೇಜವಾಬ್ದಾರಿ ಮೆರೆದರೆ ಜನರಿಗೆ ನ್ಯಾಯ ಸಿಗಲು ಸಾಧ್ಯವಿಲ್ಲ. ಹಣ ಮಾಡುವುದು ತಪ್ಪಲ್ಲ. ಆದರೆ ಅದು ಕಾನೂನು ಬದ್ಧವಾಗಿರಬೇಕು ಎಂದು ವಿಷಾದ ವ್ಯಕ್ತಪಡಿಸಿದರು.

ದುಡ್ಡು ಪಡೆದು ಮತ ಹಾಕುವವರ ಸಂಖ್ಯೆ ಏರಿಕೆಯಾದರೆ ಸಮಾಜದಲ್ಲಿ ಬದಲಾವಣೆ ಸಾಧ್ಯವಿಲ್ಲ. ಲಂಚಾವತಾರ ದೇಶದ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಈ ಸಮಸ್ಯೆ ನಿಮೂರ್ಲನೆಯಾಗಿ ಸಮಾಜದಲ್ಲಿ ನಿಸ್ವಾರ್ಥ ಸೇವೆಯ ಗುಣ ಹೆಚ್ಚಬೇಕು. ವಿದ್ಯೆ ಎಂಬುದು ರಾ ಕವಚ. ಶಿಕ್ಷಣ ಇದ್ದಾಗ ಮಾತ್ರ ಇಂದಿನ ಪರಿಸ್ಥಿತಿಯಲ್ಲಿ ಸಾಧನೆ ಸಾಧ್ಯ ಎಂದರು.

ಮನೋವೈದ್ಯ ಪದ್ಮಶ್ರೀ ಡಾ.ಸಿ.ಆರ್​. ಚಂದ್ರಶೇಖರ್​ ಮಾತನಾಡಿ, ಬಡತನ ಹಾಗೂ ಅಜ್ಞಾನ ಸಮಾಜಕ್ಕೆ ಅಂಟಿದ ದೊಡ್ಡ ಶಾಪ. ವಿಜ್ಞಾನ ಕ್ಷೇತ್ರ ಬೆಳವಣಿಗೆಯಾಗುತ್ತಿದ್ದು, ವಿವಿಧ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿದ್ದೇವೆ. ಆದರೂ ಮಾನಸಿಕ ಖಾಯಿಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಖಿನ್ನತೆ ಉಂಟಾಗಿದೆ ಎಂದರೆ ಯಾರೂ ಒಪ್ಪಿಕೊಳ್ಳಲು ತಯಾರಿಲ್ಲ. ಕರೊನಾ ನಂತರ ದೇಶದ ಶೇ.25ರಷ್ಟು ಜನರ ಮನಸ್ಸಿಗೆ ಚಿಕಿತ್ಸೆ ಅವಶ್ಯಕತೆ ಇದೆ. ಆಹಾರ, ಆಚಾರ, ವಿಚಾರ ಹಾಗೂ ವಿಹಾರದಿಂದ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದು ತಿಳಿಸಿದರು.

ಮಾನಸಿಕ ಖಾಯಿಲೆ ಬಂದಾಗ ಮೊದಲು ಮನೋವೈದ್ಯರ ಸಲಹೆ ಪಡೆದುಕೊಳ್ಳಬೇಕು. ಆದರೆ, ಜನರು ಮಾತ್ರ ಇಂದಿಗೂ ಶ್ರದ್ಧಾಕೇಂದ್ರ, ಜ್ಯೋತಿಷಿಗಳ ಮಾತಿಗೆ ಮೊದಲ ಪ್ರಾಶಸ ನೀಡುತ್ತಿದ್ದಾರೆ. ಶಿಕ್ಷಣ ಜನರನ್ನು ಪ್ರಜ್ಞಾವಂತಾರನ್ನಾಗಿಸಬೇಕು. ಇಂದಿನ ಶಿಕ್ಷಣ ಪದ್ಧತಿ ವಿದ್ಯಾವಂತರನ್ನಷ್ಟೇ ತಯಾರು ಮಾಡಲು ಸೀಮಿತಿವಾಗಿದೆ ಎಂದು ತಿಳಿಸಿದರು.

ಹಿರಿಯ ಸಾಹಿತಿ ನಾಡೋಜ ಹಂಪ ನಾಗರಾಜಯ್ಯ, ನಿವೃತ್ತ ಲೆ.ಜ. ರಮೇಶ್​ ಹಲಗಲಿ, ಸಮಂಜಸ ತಂಡದ ಪ್ರೊ.ಕೆ.ಈ.ರಾಧಾಕೃಷ್ಣ ಮತ್ತಿತರರಿದ್ದರು.

ಪದ್ಮಶ್ರೀ ಸಾಧಕರಿಗೆ ಸನ್ಮಾನ

ಪ್ರಸಕ್ತ ಸಾಲಿನಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸತರಾದ ಕೃಷಿ ತಜ್ಞ ಸತ್ಯನಾರಾಯಣ ಬೆಲ್ಲೇರಿ, ಸಮಾಜ ಸೇವಾ ಸಾಧಕ ವಿಶೇಷ ಚೇತನ ಕೆ.ಎಸ್​.ರಾಜಣ್ಣ, ಶಿಕ್ಷಣ ಸಾಧಕ ಡಾ.ಎಂ.ಕೆ.ಶ್ರೀಧರ್​, ಡಾ.ಪ್ರೇಮಾ ಧನರಾಜ್​, ಸಮಾಜಸೇವಕ ಸೋಮಣ್ಣ ಅವರನ್ನು ಗೌರವಿಸಲಾಯಿತು.

ಎಲ್ಲವೂ ದೇವರ ನಿರ್ಧಾರ!

ಬಾಲ್ಯದಲ್ಲಿ ಹಾಡುಗಾರ್ತಿಯಾಗುವ ಗುರಿ ಹೊಂದಿದ್ದೆ. ಆದರೆ ನಿರ್ಧಾರ ಬೇರೆಯಾಗಿತ್ತು. ಬಹುತೇಕ ಸಂದರ್ಭದಲ್ಲಿ ನಾವು ಏನು ಯೋಚಿಸುತ್ತೇವೆಯೋ, ಅದಕ್ಕಿಂತ ವಿರುದ್ಧವಾಗಿಯೇ ನಡೆಯುತ್ತದೆ. ಹೀಗಿರುವಾಗ ಆತ್ಮಸ್ಥೆ$ರ್ಯ ಕಳೆದುಕೊಂಡು, ದುಡುಕಿನ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ. ನಮ್ಮ ನಿರ್ಧಾರಕ್ಕಿಂತ ದೇವರ ನಿರ್ಧಾರವನ್ನೇ ಸ್ವಾಗತಿಸುವುದು ಒಳಿತು. ನಾನಿಂದು ವೈದ್ಯೆಯಾಗಲು ಭಗವಂತನೇ ಕಾರಣ. ಇದನ್ನು ನಾನು ಸ್ವೀಕರಿಸುತ್ತೇನೆ ಎಂದು ಪದ್ಮಶ್ರೀ ಪುರಸ್ಕೃತೆ ಡಾ.ಪ್ರೇಮಾ ಧನರಾಜ್​ ಹೇಳಿದರು.

ಪ್ರೀತಿಯಿಂದ, ಜಾತಿ-ಮತ ಬೇಧವಿಲ್ಲದೆ ರಾಜ್ಯದ ಜನರು ಬೆಂಬಲಿಸುತ್ತಾ ಬಂದಿದ್ದಾರೆ. ಎಲ್ಲರಿಗೂ ಅರಣ್ಯವಾಸಿಗಳ ಪರವಾಗಿ ಧನ್ಯವಾದಗಳು.

-ಸೋಮಣ್ಣ, ಪದ್ಮಶ್ರೀ ಪುರಸತ, ಸಮಾಜ ಸೇವಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net