ನಿವೃತ್ತ ಐಎಎಸ್ ಅಧಿಕಾರಿ, ಬಿಜೆಪಿ ಮುಖಂಡ ಕೆ.ಶಿವರಾಂಗೆ ಹೃದಯಾಘಾತ

New Project
Published on

ಬೆಂಗಳೂರು:ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಬಿಜೆಪಿ ಮುಖಂಡ ಕೆ. ಶಿವರಾಂ ಅವರಿಗೆ ಹೃದಯಾಘಾತವಾಗಿದ್ದು, ಬುಧವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕುಟುಂಬದ ಮೂಲಗಳು ಖಚಿತಪಡಿಸಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿವೆ.

ಐಎಎಸ್ ಅಧಿಕಾರಿಯಾಗಿ, ಚಲಚಿತ್ರ ನಟರಾಗಿ ಪರಿಚಿತರಾಗಿದ್ದ ಶಿವರಾಂ ನಿವೃತ್ತಿ ನಂತರ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಯಾಗಿದ್ದರು. 71 ವರ್ಷ ವಯಸ್ಸಿನ ಶಿವರಾಂ ಅವರು ರಾಮನಗರ ಜಿಲ್ಲೆಯ ಉರಗಳ್ಳಿ ಎಂಬ ಚಿಕ್ಕ ಗ್ರಾಮದಲ್ಲಿ ಹುಟ್ಟಿದವರು. ತಂದೆ ರಂಗಕರ್ಮಿಯಾಗಿದ್ದು, ತಂದೆಯ ಕಲೆಯನ್ನು ಮೈಗೂಡಿಸಿಕೊಂಡು ಚಿತ್ರರಂಗಕ್ಕೆ ಕಾಲಿಟ್ಟಿದ್ದ ಶಿವರಾಂ ಅವರು ‘ಬಾ ನಲ್ಲೆ ಮಧುಚಂದ್ರಕೆ’ ಎಂಬ ಚಿತ್ರದ ಮೂಲಕ ಪ್ರಸಿದ್ಧರಾಗಿದ್ದರು.

ಆಡಳಿತ, ಕಲೆ, ರಾಜಕೀಯ ಹೀಗೆ ಬಹು ಕ್ಷೇತ್ರಗಳಲ್ಲಿ ಛಾಪು ಒತ್ತಿರುವ ಶಿವರಾಂ ಅವರು ಸಾಮಾಜಿಕ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ್ದಾರೆ. ಛಲವಾದಿ ಮಹಾಸಭಾವನ್ನು ಹುಟ್ಟುಹಾಕಿ ಆ ಮೂಲಕ ಸಮುದಾಯ ಜನರಿಗೆ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net