ರಾಜಕೀಯ ಎಂದೋ ಬಿಟ್ಟಾಯಿತು : ಪ್ರೊ. ಕೆ.ಎಸ್. ರಂಗಪ್ಪ

KS-Rangappa
Published on

ಮೈಸೂರು: ರಾಜಕೀಯವನ್ನು ನಾನು ಎಂದೋ ಬಿಟ್ಟಾಯಿತು, ಪ್ರಸ್ತುತ ನಾನು ರಾಜಕೀಯದಲ್ಲಿ ಇಲ್ಲ ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಹೇಳಿದರು.

ನಮ್ಮಂತವರಿಗೆ ರಾಜಕೀಯ ಸರಿ ಹೊಂದುವುದಿಲ್ಲ. ನಾನು ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಅನುಭವಿಸಿದ ನಂತರ ರಾಜಕೀಯ ತೊರೆಯಲು ನಿರ್ಧರಿಸಿದೆ. ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net