ಹುಬ್ಬಳ್ಳಿಯಲ್ಲಿ ನಿವೃತ್ತ ನೌಕರರ ಸಭೆ 12ರಂದು

Published on

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ -ಸೇವಾ ನಿವೃತ್ತರಾದ ಹುಬ್ಬಳ್ಳಿ ಶಹರ ಮತ್ತು ಗ್ರಾಮೀಣ, ಧಾರವಾಡ ಶಹರ ಮತ್ತು ಗ್ರಾಮೀಣ ವಲಯಗಳು ಮತ್ತು ಕಲಘಟಗಿ, ಕುಂದಗೋಳ, ನವಲಗುಂದ, ಅಣ್ಣಿಗೇರಿ, ಅಳ್ನಾವರ ತಾಲೂಕುಗಳ ವಿವಿಧ ಇಲಾಖೆಗಳ ನೌಕರರ ಜಿಲ್ಲಾ ಮಟ್ಟದ ನಿವೃತ್ತರ ಸಭೆಯನ್ನು ಫೆ.-12ರಂದು ಮಧ್ಯಾಹ್ನ 2. -15ಕ್ಕೆ ನಗರದ ಸದ್ಗುರು ಸಿದ್ಧಾರೂಢ ಮಠದ ನಿರಂಜನ ಭವನದಲ್ಲಿ ಆಯೋಜಿಸಲಾಗಿದೆ.

ಏಳನೇ ವೇತನ ಆಯೋಗದಲ್ಲಿ ಆಗಿರುವ ಆರ್ಥಿಕ ನಷ್ಟ ಸರಿದೂಗಿಸುವ ಬೇಡಿಕೆ ಈಡೇರಿಸಿಕೊಳ್ಳುವ ದಿಸೆಯಲ್ಲಿ ನಡೆದಿರುವ ಹೋರಾಟದ ರೂಪುರೇಷೆ, ಮುಂದಿನ ನಡೆ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು.

ಕರ್ನಾಟಕ ನಿವೃತ್ತ ನೌಕರರ ವೇದಿಕೆ ಕೇಂದ್ರ ಸಮಿತಿ ಬೆಂಗಳೂರಿನ ರಾಜ್ಯ ಸಂಸ್ಥಾಪಕ ಮಹಾ ಪ್ರಧಾನ ಸಂಚಾಲಕ ಎಂ.ಪಿ.ಎಂ. ಷಣ್ಮುಖಯ್ಯ, ರಾಜ್ಯ ಸಂಚಾಲಕರಾದ ಅಶೋಕ ಸಜ್ಜನ, ಎಸ್.ಜಿ. ಬಿಸೆರೊಟ್ಟಿ, ವಿಜಯ ಅಣಜಿ, ಆನಂದಪ್ಪ ಡಿ., ಜಿಲ್ಲಾ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳಾದ ಎಸ್.ಬಿ. ಪಾಟೀಲ, ಸೂರಗೊಂಡ ಮತ್ತೂರ, ವೇದಿಕೆಯ ಜಿಲ್ಲಾ ಪ್ರಧಾನ ಸಂಚಾಲಕ ಎಸ್.ಜಿ. ಸುಬ್ಬಾಪೂರಮಠ, ಮುಖ್ಯ ಸಂಚಾಲಕ ಬಸವರಾಜ ಉಣಕಲ್ಲ, ಎಸ್.ಝಡ್. ಮಕಾನ್ದಾರ ಮುಂತಾದವರು ಉಪಸ್ಥಿತರಿರುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net