ಬಿಜೆಪಿ ಸೇರುವ ಇಚ್ಛೆ ವ್ಯಕ್ತಪಡಿಸಿದ ಕೋಸ್ಟ್‌ಗಾರ್ಡ್‌ ನಿವೃತ್ತ ಐಜಿ ಮನೋಜ ಬಾಡಕರ್‌

Manoj-Badakar-visit-Vijayendra
Published on

ಕಾರವಾರ: ಭಾರತೀಯ ಕೋಸ್ಟ್ಗಾರ್ಡ್ನ ನಿವೃತ್ತ ಜನರಲ್ ಕಾರವಾರ ಮೂಲದ ಮನೋಜ ಬಾಡಕರ್ ಅವರು ಬಿಜೆಪಿ ಸೇರುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಗುರುವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಕಾರವಾರ, ಅಂಕೋಲಾ ಕ್ಷೇತ್ರದ ಮಾಜಿ ಶಾಸಕ ಗಂಗಾಧರ ಭಟ್ ಇದ್ದರು.
37 ವರ್ಷಗಳ ಆಡಳಿತಾತ್ಮಕ ಅನುಭವ ಹೊಂದಿರುವ ತಮ್ಮ ಸೇವೆಯನ್ನು ಪಕ್ಷ ಬಳಸಿಕೊಳ್ಳಬಹುದು ಎಂದು ವಿಜಯೇಂದ್ರ ಅವರಿಗೆ ಹೇಳಿದ್ದೇನೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್ ಕೊಟ್ಟರೆ ಪಕ್ಷಕ್ಕೂ ಅನುಕೂಲವಾಗಲಿದೆ ಎಂದು ತಿಳಿಸಿದ್ದೇನೆ ಎಂದು ಮನೋಜ ಬಾಡಕರ್ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಾವು ಕಾನೂನಿನ ಜ್ಞಾನ, ಆಡಳಿತಾತ್ಮಕ ಅನುಭವ ಹೊಂದಿರುವುದರಿAದ ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ವಿಜಯೇಂದ್ರ ಅವರಿಗೆ ವಿವರಿಸಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಮನೋಜ ಬಾಡಕರ್ ತಿಳಿಸಿದ್ದಾರೆ.
ಮನೋಜ ಬಾಡಕರ್ ಕಾರವಾರದಲ್ಲೇ ಓದಿ ಬೆಳೆದವರಾಗಿದ್ದು, ಕೋಸ್ಟ್ಗಾರ್ಡ್, ಗೋವಾ, ಕರ್ನಾಟಕ, ಕೇರಳ ಮುಂತಾದ ವಿಭಾಗಗಳ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಕೋಸ್ಟ್ಗಾರ್ಡ್ ಪಶ್ಚಿಮ ವಲಯದ ಜನರಲ್ ಆಗಿ ಕಾರ್ಯನಿರ್ವಹಿಸಿ, ಕಳೆದ ಸೆಪ್ಟೆಂಬರ್‌ನಲ್ಲಿ ನಿವೃತ್ತರಾಗಿದ್ದರು. ಈಗಾಗಲೇ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಪೈಪೋಟಿಯಲ್ಲಿ ಹಲವರಿದ್ದು, ಮನೋಜ ಬಾಡಕರ್ ಸೇರಿಕೊಂಡಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net