

ಮಂಗಳೂರು: ಗೃಹರಕ್ಷಕ ದಳದ ಪುತ್ತೂರು ಘಟಕದ ವತಿಯಿಂದ ಮಂಗಳವಾರ ಇತ್ತೀಚೆಗೆ ಇಲಾಖೆಯಿಂದ ನಿವೃತ್ತರಾದ ಪುತ್ತೂರು ಘಟಕದ ಗೃಹರಕ್ಷಕ ಸುದರ್ಶನ್ ಜೈನ್ ಇವರಿಗೆ ಬೀಳ್ಕೊಡುಗೆ ಮತ್ತು ಸನ್ಮಾನ ಜರಗಿತು.
ಸನ್ಮಾನವನ್ನು ನೆರವೇರಿಸಿ ಮಾತನಾಡಿದ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ಡಾ. ಮುರಲೀ ಮೋಹನ್ ಚೂಂತಾರು, ಪುತ್ತೂರು ಘಟಕದ ನಿವೃತ್ತ ಗೃಹರಕ್ಷಕ ಸುದರ್ಶನ್ ಜೈನ್ ಇವರ 25 ವರ್ಷಗಳ ಸೇವೆ ಬಹಳ ಸ್ಮರಣೀಯ. ಸೇವೆಯಿಂದ ಸಿಗುವ ತೃಪ್ತಿಗೆ ಬೆಲೆ ಕಟ್ಟಲಾಗದು. ಅವರ ಸೇವೆ ಸದಾ ಸ್ಮರಣೀಯ ಮತ್ತು ಅವರ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಪುತ್ತೂರು ಘಟಕದ ಘಟಕಾಧಿಕಾರಿ ಅಭಿಮನ್ಯು ರೈ, ಸಾಜರ್ಂಟ್ ಜಗನ್ನಾಥ್ ಮತ್ತು ಪುತ್ತೂರು ಘಟಕದ ಹಿರಿಯ ಗೃಹರಕ್ಷಕ ಸಯ್ಯದ್ ಇಬ್ರಾಹಿಂ, ವಿಠಲ್ ನಾಯ್ಕ, ಸತ್ಯನಾರಾಯಣ ಭಟ್ ಮತ್ತು ಪುತ್ತೂರು ಘಟಕದ ಗೃಹರಕ್ಷಕ/ಗೃಹರಕ್ಷಕಿಯರು ಉಪಸ್ಥಿತರಿದ್ದರು.