ಕರ್ತವ್ಯ ನಿಷ್ಠೆ ಅನುಕರಣೀಯ - ಬೀಳ್ಕೊಡುಗೆ ಸಮಾರಂಭದಲ್ಲಿ ವಿನಯಕುಮಾರಿ ಬಣ್ಣನೆ

PTR_7 JUN_3
Published on


ವಿಟ್ಲ: ಶಾಲೆಯ ಬೆಳವಣಿಗೆ ಮತ್ತು ನಿಲಯದ ಸಮರ್ಪಕ ನಿರ್ವಹಣೆಯಲ್ಲಿ ಬೋಧಕೇತರ ಸಿಬ್ಬಂದಿ ಪಾತ್ರ ಮಹತ್ತರವಾದುದು ಎಂದು ಬಂಟ್ವಾಳ ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕಿ ವಿನಯ ಕುಮಾರಿ ಬಿ. ಅಭಿಪ್ರಾಯಪಟ್ಟರು.


ವಿವಿಧ ವಿದ್ಯಾರ್ಥಿ ನಿಲಯ ಮತ್ತು ಆಶ್ರಮ ಶಾಲೆಗಳಲ್ಲಿ ಅಡುಗೆಯವರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಜಾನಕಿ ಎ. ಅವರನ್ನು ಸನ್ಮಾನಿಸಿ ಮಾತನಾಡಿದರು.


ಕಡೇಶಿವಾಲಯ ವಾಲ್ಮೀಕಿ ಆಶ್ರಮ ಶಾಲೆಯ ಮೇಲ್ವಿಚಾರಕಿ ಭವ್ಯ ಪಿ. ಮಾತನಾಡಿ ಸಮಯ ಪ್ರಜ್ಞೆ, ಕರ್ತವ್ಯ ನಿಷ್ಠೆ ಮತ್ತು ವಿದ್ಯಾರ್ಥಿಗಳ ಮೇಲೆ ತೋರಿಸುತ್ತಿದ್ದ ಪ್ರೀತಿ ಕಿರಿಯ ಸಿಬ್ಬಂದಿಗೆ ಅನುಕರಣೀಯ ಎಂದು ತಿಳಿಸಿದರು.

ಕಡೇಶಿವಾಲಯ ಗ್ರಾಪಂ ಅಧ್ಯಕ್ಷೆ ಭಾರತಿ ಎಸ್. ರಾವ್, ಪಿಡಿಒ ಸುನೀಲ್ ಕುಮಾರ್, ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಕನ್ಯಾನ ಮೇಲ್ವಿಚಾರಕಿ ಪ್ರಮೀಳ ಎಚ್., ಮುಖ್ಯಶಿಕ್ಷಕಿ ಯಶೋಧ ಎಸ್. ಮತ್ತು ಆಶ್ರಮ ಶಾಲೆಯ ಬೋಧಕೇತರ ಸಿಬ್ಬಂದಿ ಮತ್ತು ಕಡೇಶಿವಾಲಯ ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.

ಶಾಲಾ ಶಿಕ್ಷಕಿ ಶ್ವೇತ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕಿ ವನಿತ ಸ್ವಾಗತಿಸಿ, ಧನಲಕ್ಷೀ ವಂದಿಸಿದರು. ಶಿಕ್ಷಕಿ ವಿದ್ಯಾ ಎ. ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net