

ಹೊಳೆಹೊನ್ನೂರು: ಸ್ಥಳೀಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳಿಗೆ ಮರು ಚಾಲನೆ ನೀಡಿ ಶೀಘ್ರ ಪೂರ್ಣಗೊಳಿಸಬೇಕು ಎಂದು ಶಾಸಕಿ ಶಾರದಾ ಪರ‍್ಯಾನಾಯ್ಕ್ ಹೇಳಿದರು.
ಹೊಳೆಹೊನ್ನೂರು ಪಪಂ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಅಬ್ಬರಘಟ್ಟ ಗ್ರಾಮದ ಕುಡಿಯುವ ನೀರು ಸರಬರಾಜು ಘಟಕ ಸ್ಥಗಿತವಾಗಿದೆ. ಪರ್ಯಾಯವಾಗಿ ನಗರೋತ್ಥಾನ ಯೋಜನೆಯಡಿ ಸಮರ್ಪಕವಾದ ಶುದ್ಧ ಕುಡಿಯುವ ನೀರು ಪೂರೈಸಲು ಈಗಾಗಲೇ ಯೋಜನೆ ಸಿದ್ಧವಾಗಿದೆ. ಶೀಘ್ರವೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.
15ನೇ ಹಣಕಾಸು ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಸಲಾಗಿದ್ದು, ಇಲ್ಲಿನ ಅಽಕಾರಿಗಳು ಈ ಕುರಿತು ಸರಿಯಾದ ಮಾಹಿತಿ ನೀಡಿಲ್ಲ. ಹಾಗಾಗಿ ಮತ್ತೊಮ್ಮೆ ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಪಂಚಾಯಿತಿ ವ್ತಾಪ್ತಿಯಲ್ಲಿ ವಿದ್ಯುತ್ ಬೀದಿದೀಪ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ ಎಂದು ಸಾರ್ವಜನಿಕರಿಂದ ದೂರು ಕೇಳಿ ಬರುತ್ತಿದ್ದು ಶೀಘ್ರ ಸರಿಪಡಿಸಿ ಕ್ರಮ ಕೈಗೊಳ್ಳುವಂತೆ ಅಽಕಾರಿಗಳಿಗೆ ಸೂಚಿಸಿದರು.
ಪಪಂ ಮುಖ್ಯಾಽಕಾರಿ ಸಾಯಿ ಚೌಟ, ಕುಡಿಯುವ ನೀರು ಸರಬರಾಜು ಯೋಜನೆ ಇಂಜಿನಿಯರ್ ಗಣೇಶ್‌ನಾಯ್ಕ್, ಸಮುದಾಯ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಽಕಾರಿ ಡಾ. ಎಂ.ದೇವಾನAದ್, ಸಿಡಿಪಿಒ ಸಿ.ಸುರೇಶ್, ಎಎಸ್‌ಐ ಎನ್.ಕಷ್ಣನಾಯ್ಕ್, ರಾಜಸ್ವ ನಿರೀಕ್ಷಕ ಬಿ.ಎಂ.ಮಾನೋಜಿರಾವ್, ಉಪತಹಸೀಲ್ದಾರ್ ಬಸವರಾಜ್, ಟಿ.ನಾಗರಾಜ್, ಮೆಸ್ಕಾಂ ಸಹಾಯಕ ಇಂಜಿನಿಯರ್ ಎಚ್.ಭುವನೇಶ್‌ಕುಮಾರ್ ವಸಂತಕುಮಾರ್, ಶಾಸಕರ ಆಪ್ತ ಸಹಾಯಕ ಲಕ್ಷ್ಮೀಶ, ಲೆಕ್ಕಾಽಕಾರಿ ಎಸ್.ಪ್ರದೀಪ್ ಕುಮಾರ್, ಪ್ರಥಮ ದರ್ಜೆ ಸಹಾಯಕ ಕೆ.ಬಸವರಾಜ್ ಹಾಗೂ ಪಪಂ ಸಿಬ್ಬಂದಿ ಇದ್ದರು.