ಸರ್ಫಿಂಗ್ ಮೊದಲ ದಿನದ ಫಲಿತಾಂಶ

 ಸರ್ಫಿಂಗ್
ಸರ್ಫಿಂಗ್
Published on

ಪ್ರಮುಖ ಮುಖ್ಯಾಂಶಗಳು

  • ಕ್ವಾರ್ಟರ್ ಫೈನಲ್‌ನಲ್ಲಿ ತಮಿಳುನಾಡಿನ ಕಮಾಲಿ ಮೂರ್ತಿ 13.83 ಗರಿಷ್ಠ ಸ್ಕೋರರ್


ಮಂಗಳೂರು: ರಾಷ್ಟ್ರೀಯ ಸರ್ಫಿಂಗ್‌ನ ಮೊದಲ ದಿನದ ಸ್ಪರ್ಧೆಗಳು ಪುರುಷರ ಓಪನ್, ಮಹಿಳೆಯರ ಓಪನ್, 18 ವರ್ಷದೊಳಗಿನ ಬಾಲಕರು ಮತ್ತು 14 ವರ್ಷದೊಳಗಿನ ಬಾಲಕರ ವಿಭಾಗಗಳಲ್ಲಿ ನಡೆದವು.


ಮೊದಲ ದಿನದ ಫಲಿತಾಂಶ

ಮಹಿಳೆಯರ ಓಪನ್ ವಿಭಾಗದಲ್ಲಿ ಕಮಾಲಿ ಮೂರ್ತಿ, ಶುಗರ್ ಶಾಂತಿ ಬನಾಸ್ಸೆ, ಇಶಿತಾ ಮಾಳವೀಯ, ದೇವಿ ರಾಮನಾಥನ್, ಸಾನ್ವಿ ಹೆಗ್ಡೆ ಮತ್ತು ಸೃಷ್ಟಿ ಸೆಲ್ವಂ ಸೆಮಿಫೈನಲ್ ತಲುಪಿದ್ದು, ಈ ಪಂದ್ಯಗಳು ಚಾಂಪಿಯನ್‌ಶಿಪ್‌ನ ಅಂತಿಮ ದಿನದಂದು ನಡೆಯಲಿವೆ.

ಪುರುಷರ ಓಪನ್ ವಿಭಾಗದಲ್ಲಿ 12 ಹೀಟ್ಸ್‌ಗಳ ಮೊದಲ ಸುತ್ತು ಪೂರ್ಣಗೊಂಡರೆ, ಮಹಿಳೆಯರ ಓಪನ್ ವಿಭಾಗವು ಕ್ವಾರ್ಟರ್ ಫೈನಲ್ ಹಂತವನ್ನು ತಲುಪಿತು. ಜೂನಿಯರ್ ವಿಭಾಗಗಳಲ್ಲೂ ತೀವ್ರ ಪೈಪೋಟಿ ಕಂಡುಬಂದಿದ್ದು, 18 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಮೊದಲ ಸುತ್ತಿನ ಹೀಟ್ಸ್‌ಗಳು ನಡೆದವು ಹಾಗೂ ಹೊಸದಾಗಿ ಪರಿಚಯಿಸಲಾದ 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆದವು.


ಪ್ರಮುಖ ಪ್ರದರ್ಶನ ನೀಡಿದವರು

ಕಿಶೋರ್ ಕುಮಾರ್ (12.90 ಅಂಕ), ರಮೇಶ್ ಬೂದಿಹಾಳ್ (12.57), ತಯಿನ್ ಅರುಣ್ (12.10), ಸಂಜಯ್ ಕುಮಾರ್ ಎಸ್ (11.84), ಅಜೀಶ್ ಅಲಿ (11.74), ಅಖಿಲನ್ ಎಸ್ (11.66), ಶಿವರಾಜ್ ಬಾಬು (11.33), ಸಂಜಯ್ ಸೆಲ್ವಮಣಿ (11.33), ಹರೀಶ್ ಎಮ್ (10.27), ಶ್ರೀಕಾಂತ್ ಡಿ (9.33), ರುಬೆನ್ ವಿ (7.93) ಮತ್ತು ಸೋಮ ಶೇಠಿ (7.30) ಅಂಕಗಳನ್ನು ಪಡೆದರು.

ಮಹಿಳೆಯರ ಓಪನ್ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ತಮಿಳುನಾಡಿನ ಕಮಾಲಿ ಮೂರ್ತಿ 13.83 ಅಂಕಗಳನ್ನು ಗಳಿಸುವ ಮೂಲಕ ದಿನದ ಎಲ್ಲಾ ವಿಭಾಗಗಳಲ್ಲೇ ಗರಿಷ್ಠ ಸ್ಕೋರರ್ ಆಗಿ ಹೊರಹೊಮ್ಮಿದರು. ಗೋವಾದ ಶುಗರ್ ಶಾಂತಿ ಬನಾಸ್ಸೆ 11 ಅಂಕಗಳೊಂದಿಗೆ ನಿಕಟ ಸ್ಪರ್ಧೆ ನೀಡಿದರು. ಇಬ್ಬರೂ ಸೆಮಿಫೈನಲ್‌ಗೆ ಲಗ್ಗೆ ಇಟ್ಟರು. ಇವರೊಂದಿಗೆ ಇಶಿತಾ ಮಾಳವೀಯ (6.40), ದೇವಿ ರಾಮನಾಥನ್ (5.90), ಸಾನ್ವಿ ಹೆಗ್ಡೆ (5.37) ಮತ್ತು ಸೃಷ್ಟಿ ಸೆಲ್ವಂ (5.33) ಸೆಮಿಫೈನಲ್ ತಲುಪಿದ್ದಾರೆ.


18 ವರ್ಷದೊಳಗಿನ ಬಾಲಕರ ವಿಭಾಗ

ಇದರಲ್ಲಿ ಒಟ್ಟು 19 ಸರ್ಫರ್‌ಗಳು ಕ್ವಾರ್ಟರ್ ಫೈನಲ್ ಸ್ಥಾನಕ್ಕಾಗಿ ಆರು ಹೀಟ್ಸ್‌ಗಳಲ್ಲಿ ಸ್ಪರ್ಧಿಸಿದರು. ಹರೀಶ್ ಪಿ. (12.67), ತಯಿನ್ ಅರುಣ್ (10.33), ಸೋಮ ಶೇಠಿ (9.93), ಪ್ರದೀಪ್ ಪೂಜಾರಿ (9.07), ಪ್ರಹ್ಲಾದ್ ಶ್ರೀರಾಮ್ (8.60), ಶೇಖ್ ದಾವೂದ್ ಎಸ್ (6.93), ಯೋಗೇಶ್ ಎ (6.33), ರಾಜು ಸುರೇಶ್ ಪೂಜಾರಿ (5.63), ಪ್ರವೀಣ್ ಪೂಜಾರಿ (4.40), ಹಾರೂಸ್ ಮೊಹೈಯಾದ್ದೀನ್ (3.63), ಸಂಕು ಕಾರ್ತಿಕ್ (3.07) ಮತ್ತು ಆಕಾಶ್ ಪೂಜಾರಿ (2.57) ಅರ್ಹತೆ ಪಡೆದರು.


14 ವರ್ಷದೊಳಗಿನ ಬಾಲಕರ ವಿಭಾಗ

ಈ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯಗಳೊಂದಿಗೆ ಮೊದಲ ದಿನದ ಆಟ ಮುಕ್ತಾಯವಾಯಿತು. ಹರೀಶ್ ಪಿ (11.33), ಶೇಖ್ ದಾವೂದ್ ಎಸ್ (6.67), ಯೋಗೇಶ್ ಎ (6.50), ಪ್ರಹ್ಲಾದ್ ಶ್ರೀರಾಮ್ (5.43), ಪ್ರಶಾಂತ್ (4.53), ಮುಖೇಶ್ (3.70), ಲಿಖಿತ್ ಸಾಲ್ಯಾನ್ (2.67) ಮತ್ತು ಇಶಾಂತ್ ಕೆ. ಸತೀಶ್ (2.07) ಶನಿವಾರ ನಡೆಯಲಿರುವ ಸೆಮಿಫೈನಲ್‌ಗೆ ಅರ್ಹತೆ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net