ವಿಶ್ವ ಪ್ರಜಾಪ್ರಭುತ್ವ ದಿನದ ಸ್ಪರ್ಧೆಯ ಫಲಿತಾಂಶ ಪ್ರಕಟಣೆ

Published on

ಬೆಂಗಳುರು: ವಿಶ್ವ ಪ್ರಜಾಪ್ರಭುತ್ವ ದಿನದ ಅಂಗವಾಗಿ ಗಣಕರಂಗ ಧಾರವಾಡ ಸಂಸ್ಥೆ ಆಯೋಜಿಸಿದ್ದ ನಮ್ಮ ಸಂವಿಧಾನ ವಿಷಯವಾದ ಕವನ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ. ಈ ಸ್ಪರ್ಧೆಯಲ್ಲಿ ರಾಜ್ಯಾಧ್ಯಾಂತ ಸುಮಾರು ೭೦ ಕ್ಕೂ ಹೆಚ್ಚು ಕವಿಗಳು ಭಾಗವಹಿಸಿದ್ದರು. ಈ ಮಹತ್ವದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಸುಹೇಚ ಪರಮವಾಡಿ, ದ್ವಿತೀಯ ಸ್ಥಾನವನ್ನು ಇಬ್ಬರೂ ಕವಿಗಳಾದ ಸುರೇಶ ನೆಗಳಗುಳಿ ಹಾಗೂ ಮಾಯಣ್ಣ ಕಿರಂಗೂರು ಪಡೆದಿದ್ದಾರೆ. ತೃತೀಯ ಸ್ಥಾನವನ್ನು ಅಮರೇಶ ಗೊರಚಿಕನವರ ಪಡೆದಿದ್ದಾರೆ, ಉಳಿದಂತೆ ತೀರ್ಪುಗಾರರ ಮೆಚ್ಚುಗೆ ಬಹುಮಾನವನ್ನು ಸುಧಾ ಬಡಿಗೇರ, ದ್ರಾಕ್ಷಾಯಿನಿ ಉದಗಟ್ಟಿ, ಅಶೋಕ ವನಕೇರಿ, ಬಸವರಾಜ ಉಪ್ಪಿನ ಮತ್ತೂ ಪಾರ್ವತಿದೇವಿ ತುಪ್ಪದ ಈ ಐವರು ಕವಿಗಳು ಪಡೆದುಕೊಂಡಿದ್ದಾರೆ. ಈ ಸ್ಪರ್ಧೆಗೆ ತೀರ್ಪುಗಾರರಾಗಿ ಹಿರಿಯ ಕವಿ ಎಚ್.ಕೆ ಸುಬ್ಬಯ್ಯ (ಸುಬ್ಬು ಹೊಲೆಯಾರ್ ) ಇದ್ದರು. ಗಣಕರಂಗ ಸಂಸ್ಥೆಯ ಮುಖ್ಯಸ್ಥರಾದ ಹಿಪ್ಪರಗಿ ಸಿದ್ದರಾಮವರ ನೇತೃತ್ವದಲ್ಲಿ ಈ ಸ್ಪರ್ಧೆ ನಡೆದಿತ್ತು. ಬಹುಮಾನ ವಿಜೇತರಿಗೆ ಪುಸ್ತಕ ಹಾಗೂ ಇನ್ನಿತರ ಬಹುಮಾನವನ್ನು ಅಂಚೆ ಮೂಲಕ ಕಳಿಸಿಕೊಡಲಾಗುವುದು ಎಂದು ಕಸಾಪ ಮಯೂರ್ ವರ್ಮ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಗಣಪತಿ ಗೋ ಚಲವಾದಿ (ಗಗೋಚ) ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net