ಹಕ್ಕಿ ಜ್ವರದ ಹಿನ್ನೆಲೆಯಲ್ಲಿ ಕೋಳಿಗಳ ಸಾಗಾಣೆ, ಮಾರಾಟಕ್ಕೆ ನಿರ್ಬಂಧ

IMG-20250228-WA0022.jpg
Published on

ಚಿಕ್ಕಬಳ್ಳಾಪುರ: ಹಕ್ಕಿ ಜ್ವರ ಪತ್ತೆಯಾಗಿರುವ ತಾಲೂಕಿನ ವರದಹಳ್ಳಿ ಗ್ರಾಮಕ್ಕೆ ಹಕ್ಕಿ ಸಾಗಾಣಿಕೆಗೆ ಜಿಲ್ಲಾಡಳಿತವು ನಿರ್ಬಂಧ ಹೇರಿದೆ.
ಗ್ರಾಮದಲ್ಲಿ ೩೦ ರಿಂದ ೩೨ ಕೋಳಿಗಳು ಏಕ ಕಾಲದಲ್ಲಿ ಸಾವನ್ನಪ್ಪಿದ್ದು ಇದರ ಕಾರಣವನ್ನು ತಿಳಿಯಲು ಮಾದರಿಗಳನ್ನು ಬೆಂಗಳೂರಿನ ಭಾರತೀಯ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಕಳುಹಿಸಲಾಗಿತ್ತು. ಪರೀಕ್ಷೆಯಲ್ಲಿ ಹಕ್ಕಿ ಜ್ವರ ಇರುವುದು ದೃಢಪಟ್ಟಿದ್ದು ಈ ಹಿನ್ನಲೆಯಲ್ಲಿ ಸೋಂಕನ್ನು ತುರ್ತಾಗಿ ಹತೋಟಿಗೆ ತರುವ ಉದ್ದೇಶದಿಂದ ೨೦೨೫ ನೇ ಸಾಲಿನ ಮೇ.೨೭ ರವರೆಗೆ ಗ್ರಾಮಕ್ಕೆ ಹಕ್ಕಿ ಸಾಗಾಣಿಕೆ ವಾಹನ ಹಾಗೂ ಹೊರಗಡೆಯಿಂದ ಕೋಳಿಗಳನ್ನು ಗ್ರಾಮಕ್ಕೆ ತರುವುದನ್ನು ಮತ್ತು ೧ ಕಿಮೀ ವ್ಯಾಪ್ತಿಯ ಗ್ರಾಮದ ಸುತ್ತಮುತ್ತಲು ಪ್ರದೇಶಕ್ಕೆ ತರುವುದನ್ನು ನಿರ್ಬಂಧಿಸಿ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.  ಹಾಗೆಯೇ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಂಬAಧಪಟ್ಟ ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗೆ ಸೂಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net