ಒಬ್ಬರೇ 4-5 ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಕಡಿವಾಣ

21_BGV_manju1
ಬೆಳಗಾವಿ ನಗರದ ಎಸ್​.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭವನ್ನು ಸಚಿವ ಶಿವಾನಂದ ಪಾಟೀಲ ಉದ್ಘಾಟಿಸಿದರು. ರಾಜಗೋಪಾಲ, ಮಲ್ಲನಗೌಡ ಪಾಟೀಲ, ಅಭಿನಂದನ ಪಾಟೀಲ, ಅಭಯ ಸರನಾಯಕ, ವಿ.ಜೆ.ರವಿ ಇತರರಿದ್ದರು.
Published on

ಬೆಳಗಾವಿ: ಸಕ್ಕರೆ ಉದ್ಯಮ ಕ್ಷೇತ್ರದಲ್ಲಿ ಒಬ್ಬರೇ ನಾಲ್ಕೆ$ದು ಕಾರ್ಖಾನೆ ಆರಂಭಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ. ತಾವೇ ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕು. ಇದನ್ನು ನಿಯಂತ್ರಿಸಲು ಶಾಸನ ರೂಪಿಸುವ ಪರಿಸ್ಥಿತಿ ತರಬೇಡಿ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಎಚ್ಚರಿಸಿದರು.

ನಗರದ ಎಸ್​.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಕ್ಕರೆ ಕಾರ್ಖಾನೆಗಳಿಗೆ 2023&24ನೇ ಸಾಲಿನ ಹಂಗಾಮಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಬ್ಬು ಬೆಳೆಯುವ ಪ್ರದೇಶಕ್ಕೆ ಅನುಗುಣವಾಗಿ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಿ. ಕಬ್ಬು ಬೆಳೆಯುವ ಪ್ರದೇಶ ಒಂದು ಕಡೆ, ಸಕ್ಕರೆ ಕಾರ್ಖಾನೆ ಸ್ಥಾಪಿಸುವುದು ಮತ್ತೊಂದು ಕಡೆಯಾದರೆ ರೈತರು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದರು.

ಸಕ್ಕರೆ ಕಾರ್ಖಾನೆಗಳ ನಡುವೆ ಆರೋಗ್ಯಕರ ಸ್ಪರ್ಧೆ ಒಳ್ಳೆಯದು. ಕಾರ್ಖಾನೆಗಳ ಪ್ರಗತಿಯಲ್ಲಿ ರಾಜ್ಯ ಸರ್ಕಾರದ ಕೊಡುಗೆ ಗಣನೀಯವಾಗಿದೆ. ರೈತರಿಗೆ ನೀರು, ವಿದ್ಯುತ್​, ಕಬ್ಬಿನ ಬೀಜ ಸೇರಿ ಹಲವು ಸವಲತ್ತು ಒದಗಿಸದಿದ್ದರೆ ಕಾರ್ಖಾನೆಗಳು ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಇದು ಗಮನದಲ್ಲಿರಲಿ ಎಂದು ತಿಳಿಸಿದರು.

ಹೆಚ್ಚಿನ ಇಳುವರಿ ಆಸೆಗಾಗಿ ಗುತ್ತಿಗೆ ಕೃಷಿ ಪದ್ಧತಿ ಹೆಚ್ಚುತ್ತಿದ್ದು, ಇದರಿಂದ ಭೂ ಫಲವತ್ತತೆ ನಾಶವಾಗುವ ಅಪಾಯವಿದೆ. ಕಾರ್ಖಾನೆಗಳು ಈ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು. ಭೂಮಿ ನಿರ್ವಹಣೆಯ ಜವಾಬ್ದಾರಿ ಕೂಡ ಕಾರ್ಖಾನೆಗಳ ಮೇಲಿದೆ. ಸಕ್ಕರೆ ಉದ್ಯಮದ ಬೆಳವಣಿಗೆ ದೃಷ್ಟಿಯಿಂದ ಎಸ್​.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಸ್ಥಾಪಿಸಲಾಗಿದ್ದು, ಕಬ್ಬು ಬೆಳೆಗಾರರಿಗೂ ಸಂಸ್ಥೆಯಿಂದ ಹೊಸ ತಳಿ ಸೇರಿ ಹಲವು ನೆರವು ನೀಡಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಎರಡು ವರ್ಷಗಳಿಂದ 6 ಲ ಹೆಕ್ಟೇರ್​ ೇತ್ರದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಉತ್ತಮ ಮಳೆಯಿಂದಾಗಿ 1 ಲ ಹೆಕ್ಟೇರ್​ ೇತ್ರ ಹೆಚ್ಚಾಗುವ ನಿರೀೆ ಇದ್ದು, ಕಾರ್ಖಾನೆಗಳಿಗೆ ಇನ್ನು ಮುಂದೆ ಕಬ್ಬಿನ ಕೊರತೆಯಾಗದು ಎಂದು ಭರವಸೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಉತ್ತಮ ತಂತ್ರಜ್ಞಾನ ಒಳಗೊಂಡಿರುವ, ಪರಿಸರ ಮಾಲಿನ್ಯ ನಿಯಂತ್ರಿಸಿರುವ ಹಾಗೂ ಪರಿಸರ ಸ್ನೇಹಿ ವಾತಾವರಣ ನಿರ್ಮಿಸಿರುವ ಬೆಳಗಾವಿ, ಬಾಗಲಕೋಟೆ, ಮಂಡ್ಯ ಜಿಲ್ಲೆಯ ಖಾಸಗಿ ಮತ್ತು ಸಹಕಾರಿ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಕ್ಕರೆ ಸಂಸ್ಥೆಯ ನಿರ್ದೇಶಕ ರಾಜಗೋಪಾಲ, ಮಲ್ಲನಗೌಡ ಪಾಟೀಲ, ಅಭಿನಂದನ ಪಾಟೀಲ, ಅಭಯ ಸರನಾಯಕ, ವಿ.ಜೆ.ರವಿ ಇತರರಿದ್ದರು.

ಸಿಎಂ ಬದಲಾವಣೆ ಹೈಕಮಾಂಡ್​ ತೀರ್ಮಾನ

ವಸತಿ ಯೋಜನೆಯಲ್ಲಿ ಮನೆ ಮಂಜೂರಾತಿ ಹಣ ನೀಡಿದವರಿಗಷ್ಟೇ ಮನೆ ಹಂಚಿಕೆ ಕುರಿತು ಆಳಂದ ಶಾಸಕ ಬಿ.ಆರ್​. ಪಾಟೀಲ ಮಾತನಾಡಿರುವ ಆಡಿಯೋ ವೈರಲ್​ ಕುರಿತು ಪ್ರತಿಕ್ರಿಯಿಸುವುದಿಲ್ಲ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು. ಕೆಪಿಸಿಸಿ ಅಧ್ಯಕ್ಷರ ನೇಮಕ, ಸಿಎಂ ಬದಲಾವಣೆ ಹೈಕಮಾಂಡ್​ ತೀರ್ಮಾನ ಮಾಡುತ್ತದೆ. ಈ ಕುರಿತು ಪಕ್ಷದ ಆತಂಕರಿಕ ಚರ್ಚೆ ನಡೆದಿಲ್ಲ. ಸಚಿವ ಸ್ಥಾನದಲ್ಲಿ ಯಾರನ್ನು ಮುಂದುವರಿಸಬೇಕು, ಯಾರನ್ನು ಬಿಡಬೇಕು ಎಂಬುದು ಮುಖ್ಯಮಂತ್ರಿಗೆ ಬಿಟ್ಟ ವಿಚಾರ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net