ಹುಳಿಯಡ್ಕದ ವೀರಭದ್ರ ದೇವಳ ಜೀರ್ಣೋದ್ಧಾರ : ಹಿಮಕರ ಮಂಡೆಕೋಲು ಮಾಹಿತಿ

Published on

ಸುಳ್ಯ: ಉಬರಡ್ಕ ಗ್ರಾಮದ ಹುಳಿಯಡ್ಕದಲ್ಲಿ ವೀರಭದ್ರ ದೇವರ ಭಂಡಾರ ಮನೆ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಶ್ರೀ ವೀರಭದ್ರ ಜೀರ್ಣೋದ್ಧಾರ ಸಮಿತಿ ಆಶ್ರಯದಲ್ಲಿ ವೀರಭದ್ರ ದೇವಸ್ಥಾನ ಜೀರ್ಣೋದ್ಧಾರಗೊಳ್ಳುತ್ತಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಹಿಮಕರ ಮಂಡೆಕೋಲು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುನ್ನೂರು ವರ್ಷಗಳ ಇತಿಹಾಸವಿರುವ ಶ್ರೀ ವೀರಭದ್ರ ದೇವರನ್ನು ಸುಳ್ಯ ತಾಲೂಕಿನ ಮಡಿವಾಳ ಸಮಾಜದವರು ಆರಾಧಿಸಿ ಬರುತ್ತಿದ್ದು, ಅಷ್ಟಮಂಗಲ ಪ್ರಶ್ನೆ ನಡೆದು ಜೀರ್ಣೋದ್ಧಾರ ನಡೆಯುತ್ತಿದೆ. 0.36 ಎತರೆ ಸ್ಥಳವನ್ನು ದಾನಿಗಳು ದಾನಪತ್ರದ ಮೂಲಕ ಟ್ರಸ್ಟ್‌ಗೆ ಹಸ್ತಾಂತರಿಸಿದ್ದಾರೆ. ಪ್ರಸ್ತುತ ವೀರಭದ್ರ ದೇವರ ದೇವಸ್ಥಾನ, ಭಂಡಾರ ಮನೆ ಹಾಗೂ ನಾಗದೇವರ ಕಟ್ಟೆಯ ಕೆಲಸ ಶೇ.60ರಷ್ಟು ಪೂರ್ಣಗೊಂಡಿದೆ. ಇದರೊಂದಿಗೆ ಸುತ್ತು ಆವರಣ ಗೋಡೆ, ನೆಲ ಹಾಸು, ಶಾಶ್ವತ ಚಪ್ಪರ, ಸುಳ್ಯ-ಉಬರಡ್ಕ ರಸ್ತೆಯಿಂದ ದೇವಸ್ಥಾನಕ್ಕೆ ಹೋಗುವ ಮಾರ್ಗ ಹಾಗೂ ಇನ್ನಿತರ ಕೆಲಸಗಳು ಭಕ್ತರ ಸಹಕಾರದಿಂದಲೇ ನಡೆಯಬೇಕಾಗಿದೆ ಎಂದರು.

ಮಡಿವಾಳ ಸಂಘದ ಅಧ್ಯಕ್ಷ ಲೋಕೇಶ್ ಮಡಿವಾಳ ಏನೆಕಲ್ಲು, ಕಾರ್ಯದರ್ಶಿಗಳಾದ ಜನಾರ್ದನ ಚೊಕ್ಕಾಡಿ, ಪುಟ್ಟಣ್ಣ ಮಡಿವಾಳ, ಭಂಡಾರಮನೆ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಉಮೇಶ್ ಮಡಿವಾಳ ಹುಳಿಯಡ್ಕ, ಪ್ರಮುಖರಾದ ಆನಂದ ಎಚ್.ಹಲಸಿನಡ್ಕ, ಹೇಮಕುಮಾರ್ ಹುಳಿಯಡ್ಕ ಹಾಗೂ ಯಶೋಧರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net