

ನುಗ್ಗೇಹಳ್ಳಿ: ಶಿವನಿಂದ ನಿರ್ಮಿತವಾದ ಪ್ರಪಂಚದಲ್ಲಿ ಭಗವಂತ ಏನೆಲ್ಲವನ್ನು ಕೊಟ್ಟಿದ್ದಾನೆ. ಅದರ ಕೃತಜ್ಞತೆಯನ್ನು ತಿಳಿದು ಬಾಳಿದರೆ ಜೀವನ ಸಾರ್ಥಕವಾಗುತ್ತದೆ ಎಂದು ಕತ್ರಿಘಟ್ಟ ಮೇಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ ಗುರೂಜಿ ತಿಳಿಸಿದರು.
ಹೋಬಳಿ ಕೇಂದ್ರದ ತಿಪಟೂರು ರಸ್ತೆಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಚಂದ್ರಮೌಳೀಶ್ವರ ಸ್ವಾಮಿ ದೇಗುಲ ಜೀರ್ಣೋದ್ಧಾರ ಮತ್ತು ಚಂಡಿಕೇಶ್ವರ ಸ್ವಾಮಿ ವಿಗ್ರಹ ಕಳಸ ಪ್ರತಿಷ್ಠಾಪನೆಯ ಕುಂಭಾಭಿಷೇಕದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನುಷ್ಯನಾಗಿ ಹುಟ್ಟಿದ ಮೇಲೆ ಏನನ್ನಾದರೂ ಸಾಧನೆ ಮಾಡಬೇಕು. ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು ಎಂದು ತಿಳಿಸಿದರು.
ಮುಖಂಡರಾದ ತೋಟಿ ನಾಗರಾಜ್, ಬಿ. ಆರ್.ದೊರೆಸ್ವಾಮಿ, ಉದ್ಯಮಿ ಜಗದೀಶ್, ಡಿ.ಶಿವಪ್ಪ, ಗ್ರಾ.ಪಂ.ಸದಸ್ಯರಾದ ಮಂಜುನಾಥ್, ಶಿವಕುಮಾರ್, ಜಿರ್ಣೋದ್ಧಾರ ಸಮಿತಿ ಅಧ್ಯಕ್ಷ ರಂಜಿತ್, ಕಾರ್ಯದರ್ಶಿ ಗಂಗಾಧರ್, ಉಪಾಧ್ಯಕ್ಷ ದೇವರಾಜ್, ರಂಗಸ್ವಾಮಿ, ಹೂವಿನಳ್ಳಿ ಬಾಬು, ಮಂಜುನಾಥ್, ಅರ್ಚಕ ರಘು ದೀಕ್ಷಿತ್, ಸಮಿತಿ ಸದಸ್ಯರಾದ ವಿನಯ್ ಕುಮಾರ್, ರಂಗಪ್ಪ, ಶಿವಸ್ವಾಮಿ, ಮಂಜಪ್ಪ, ಅವಿನಾಶ್, ವಿನಯ್ ದೀಪ್, ಮನೋಜ್ ಹಾಗೂ ಭಕ್ತರು ಇದ್ದರು.