ಸರ್ಕಾರಿ ಬಸ್‌ಸೇವೆ ಮತ್ತೆ ಆರಂಭಿಸಿ

5nrp 4.
Published on

ಎನ್.ಆರ್.ಪುರ: ಎನ್.ಆರ್.ಪುರದಿಂದ ಬೆಳಗ್ಗೆ 10.15ಕ್ಕೆ ತರೀಕೆರೆ ಹೋಗಿ ಮತ್ತೆ

1.50ಕ್ಕೆ ಎನ್.ಆರ್.ಪುರಕ್ಕೆ ಬರುತ್ತಿದ್ದ ಸರ್ಕಾರಿ ಬಸ್‌ನ್ನು ಕಳೆದ ಒಂದು ವಾರದಿಂದ

ನಿಲ್ಲಿಸಿರುವುದನ್ನು ವಿರೋಧಿಸಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ

ಸದಸ್ಯರು ಬಸ್‌ನಿಲ್ದಾಣದಲ್ಲಿ ಬಸ್ ತಡೆದು ಬಸ್‌ಸೇವೆ ಮತ್ತೆ ಆರಂಭಿಸಬೇಕು

ಎಂದು ಮನವಿ ಮಾಡಿದರು.

ಕಳೆದ ಒಂದು ವಾರದಿಂದ 1.50ಕ್ಕೆ ಎನ್.ಆರ್.ಪುರಕ್ಕೆ ಬಂದು ಶೃಂಗೇರಿಗೆ

ಹೋಗುವ ಸರ್ಕಾರಿ ಬಸ್ ನಿಲ್ಲಿಸಿದ್ದಾರೆ. ಇದರಿಂದ ತರೀಕೆರೆಯಿಂದ ಶೃಂಗೇರಿಗೆ

ಓಡಾಡುವ ಪ್ರಯಾಣಿಕರಿಗೆ ತೊಂದರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಗ್ಯಾರಂಟಿ ಸಮಿತಿ

ಸದಸ್ಯರಾದ ಇಂದಿರಾನಗರ ರಘು, ಕೆ.ಎಮ್.ನಿತ್ಯಾನಂದ ಬಸ್ ನಿಲ್ಲಿಸಿ ಚಿಕ್ಕಮಗಳೂರು

ಡಿಪೋ ವ್ಯವಸ್ಥಾಪಕ ಸುರೇಶ್‌ನಾಯ್ಕರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ

ನಾಳೆಯಿಂದ 1.50ರ ಬಸ್ ಬಿಡದಿದ್ದರೆ ಬಸ್ ತಡೆದು ಪ್ರತಿಭಟನೆ ಮಾಡಲಾಗುವುದು

ಎಂದ ಎಚ್ಚರಿಸಿದರು. ಈ ಹಿನ್ನೆಲೆಯಲ್ಲಿ ನಾಳೆಯಿಂದ ಬಸ್ ಬಿಡುವುದಾಗಿ

ಒಪ್ಪಿಕೊಂಡಿದ್ದಾರೆ ಎಂದು ಇಂದಿರಾನಗರ ರಘು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net