ಸಾಮಾಜಿಕ ಬದಲಾವಣೆ ಹೊಣೆ

P PURA DINAA 05 (3)
Published on

ಪರಶುರಾಮಪುರ: ಸಾಮಾಜಿಕ ಬದಲಾವಣೆಗೆ ತಕ್ಕಂತೆ ವಿದ್ಯಾರ್ಥಿಗಳನ್ನು ರೂಪಿಸುವ ಹೊಣೆ ಶಿಕ್ಷಕರದ್ದು ಎಂದು ಸರ್ವೋದಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಚನ್ನಕೇಶವ ಹೇಳಿದರು.

ಗ್ರಾಮದ ಹೊರವಲಯದಲ್ಲಿರುವ ಸಂಸ್ಥೆಯ ಆವರಣದಲ್ಲಿ ಮಂಗಳವಾರ ಡಾ.ರಾಧಾಕೃಷ್ಣನ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಇಂದಿನ ಆಧುನಿಕ ಕಾಲಘಟ್ಟದ ವಿದ್ಯಾರ್ಥಿಗಳಿಗೆ ದಾರ್ಶನಿಕರ ಕುರಿತು ಪರಿಚಯಿಸುವ ಮೂಲಕ ಅವರಲ್ಲಿ ಸಾಧನೆ ಮಾಡುವ ಛಲ ಹುಟ್ಟುಹಾಕಬೇಕು ಎಂದರು.

ಸಂಸ್ಥೆಯ ಅಧೀಕ್ಷಕ ಪಂಚಾಕ್ಷರಪ್ಪ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಹಾಗೂ ಸಮುದಾಯದ ವಿವಿಧ ಸಂಘಗಳು ತಮ್ಮ ಪ್ರದೇಶದ ವ್ಯಾಪ್ತಿಯಲ್ಲಿ ಶಿಕ್ಷಕರ ಸೇವೆ ಗುರುತಿಸಿ ಗೌರವಿಸುವ ಪದ್ಧತಿಯಿಂದ ಅವರಲ್ಲಿನ ಜವಾಬ್ದಾರಿ ಹೆಚ್ಚಲಿದೆ ಎಂದು ಹೇಳಿದರು.

ಶಿಕ್ಷಕರನ್ನು ಗೌರವಿಸಲಾಯಿತು. ಪ್ರಾಚಾರ್ಯ ಜೆ.ಶಾಂತಕುಮಾರ, ಮುಖ್ಯಶಿಕ್ಷಕರಾದ ಶ್ರೀಶೈಲಮೂರ್ತಿ, ಶ್ರೀಮತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net