

ವಿಜಯಪುರ : ವಿದ್ಯಾರ್ಥಿಗಳಲ್ಲಿರುವ ವಿಭಿನ್ನ ರೀತಿಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಅವರಲ್ಲಿರುವ ಕಲೆ ಅನಾವರಣಗೊಳ್ಳಲು ಸಾಧ್ಯ ಎಂದು ಪ್ರಾರ್ಥನಾ ಪಬ್ಲಿಕ್ ಶಾಲೆ ಸಂಸ್ಥಾಪಕ ಎಚ್.ಎಂ. ಸಾರವಾಡ ಹೇಳಿದರು.ನಗರದ ಸಾಯಿ ಪಾರ್ಕ್ ಬಳಿಯ ಪ್ರಾರ್ಥನಾ ಪಬ್ಲಿಕ್ ಶಾಲೆ ಮತ್ತು ಪಿಯು ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳನ್ನು ಮುಂಬರುವ ದಿನಗಳಲ್ಲಿ ಸಮಾಜದ ಉತ್ತಮ ನಾಗರಿಕರನ್ನಾಗಿ ರೂಪಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಪ್ರಾಚಾರ್ಯ ಎಸ್.ಕೆ. ಚೌದರಿ ಮತ್ತು ಕಾಲೇಜಿನ ಪ್ರಾಚಾರ್ಯ ಚಂದ್ರಾರೆಡ್ಡಿ ಮಾತನಾಡಿ, ಶಿಕರು ಸಮಾಜಕ್ಕೆ ದೀಪದಂತೆ ಬೆಳಕು ನೀಡುವವರು. ವಿದ್ಯಾರ್ಥಿಗಳು ತಮ್ಮ ಶಿಕರನ್ನು ಆದರ್ಶವಾಗಿ ತೆಗೆದುಕೊಂಡು, ಶ್ರಮ ಮತ್ತು ಶಿಸ್ತುಗಳ ಮೂಲಕ ಜೀವನದಲ್ಲಿ ಯಶಸ್ವಿಯಾಗಬೇಕೆಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಶಿಕರಿಗೆ ಪುಷ್ಪಗುಚ್ಛ ನೀಡಿ ಶುಭಾಶಯ ಕೋರಿದರು. ವಿದ್ಯಾರ್ಥಿಗಳಾದ ವಿದ್ಯಾ, ರಪಾನಾಜ್, ಮಧು, ಆರತಿ ನಿರೂಪಿಸಿದರು. ಉಪನ್ಯಾಸಕರಾದ ಸಂಜೀವಕುಮಾರ, ಪ್ರವಿಣಕುಮಾರ, ಶಿಕ ದುಂಡಯ್ಯ ಮತ್ತಿತರರಿದ್ದರು.
ವಿಜಯಪುರದ ಪ್ರಾರ್ಥನಾ ಪಬ್ಲಿಕ್ ಶಾಲೆ ಮತ್ತು ಪಿಯು ಕಾಲೇಜಿನಲ್ಲಿ ಶಿಕರ ದಿನ ಆಚರಿಸಲಾಯಿತು. ಎಚ್.ಎಂ. ಸಾರವಾಡ, ಎಸ್.ಕೆ. ಚೌದರಿ, ಚಂದ್ರಾರೆಡ್ಡಿ ಮತ್ತಿತರರಿದ್ದಾರೆ.